ಲವ್‍ ಜಿಹಾದಿ ಪ್ರಕರಣ | ಬದಿಯಡ್ಕ ಪೊಲೀಸ್ ಠಾಣಾ ಎದುರು ವಿಹಿಂಪ ನಿಂದ ಪ್ರತಿಭಟನೆ

ಬದಿಯಡ್ಕ: ಲವ್ ಜಿಹಾದಿ ಪ್ರಕರಣವೊಂದನ್ನು ವಿರೋಧಿಸಿ  ವಿಶ್ವ ಹಿಂದೂ ಪರಿಷತ್ ವತಿಯಿಂದ ಬದಿಯಡ್ಕ ಠಾಣಾ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕೆಲವು ದಿನಗಳ ಹಿಂದೆ ಕೇರಳದ ಅನ್ಯ ಕೋಮಿನ ಯುವಕನೋರ್ವ ಮಂಗಳೂರಿನ ಹಿಂದೂ ಯುವತಿಯನ್ನು ಯಾಮಾರಿಸಿ ಮದುವೆಯಾದ ಘಟನೆ ಕೇರಳ ಮೂಲದಲ್ಲಿ ನಡೆದಿತ್ತು. ಇದೊಂದು ಲವಜಿಹಾದ್ ಪ್ರಕರಣವಾಗಿದ್ದು, ಈ ಪ್ರಕರಣವನ್ನು ವಿರೋಧಿಸಿ ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದವು. ಈ ಬಗ್ಗೆ ಬದಿಯಡ್ಕ ಠಾಣಾ ಮುಂಭಾಗದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆ ನಡೆಸಲು ಠಾಣೆಯು ಅನುಮತಿ ನೀಡದ ಹಿನ್ನಲೆ ಪೊಲೀಸರು ಪ್ರತಿಭಟನೆ ನಡೆಯುವ ವೇಳೆ ಪ್ರತಿಭಟನೆಯನ್ನು ತಡೆಯಲು ಯತ್ನಿಸಿದ್ದದು ಈ ವೇಳೆ ಹಿಂದೂ ಕಾರ್ಯಕರ್ತರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಗಲಭೆ ನಡೆದಿದೆ. ಈ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಕರ್ನಾಟಕ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಮುಖ, ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಪ್ರಮುಖ ಅಕ್ಷಯ್ ರಜಪೂತ್ ಸೇರಿದಂತೆ 5 ಹಿಂದೂ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದ ಸುಮಾರು 200 ಹಿಂದೂ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಾಗಿದೆ.



































 
 

ಕೇರಳದಲ್ಲಿ ಸಿಪಿಎಂ ಸರ್ಕಾರ ಆಡಳಿತದಲ್ಲಿದ್ದು, ಹಿಂದೂ ವಿರೋಧಿ ನೀತಿಗಳನ್ನು ಓಲೈಸುತ್ತಿದೆ. ಇದರಿಂದ ಹಿಂದೂಗಳ ಮೇಲೆ ಬೇಕಾಬಿಟ್ಟಿ ದಬ್ಬಾಳಿಕೆ, ಹಿಂದೂ ಸಂಘಟನೆಯ ಪ್ರಮುಖರ ಮೇಲೆ ಸುಳ್ಳು ಕೇಸು ದಾಖಲು, ಇನ್ನಿತರ ಶೋಷಣೆಗಳು ನಡೆಯುತ್ತಿದೆ. ಇಂತಹ ಹಿಂದೂ ವಿರೋಧಿ ನೀತಿಗಳನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತೇವೆ ಎಂದೂ ಹಿಂದೂ ಕರ್ನಾಟಕ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಮುಖ್ ಅಕ್ಷಯ್ ರಜಪೂತ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top