ಪುತ್ತೂರು ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿ ಕ್ಯಾಂಪ್ಕೊ ಸುಳ್ಯ ಶಾಖೆಯ ಸಕ್ರಿಯ ಸದಸ್ಯ ಪ್ರದ್ಯುಮ್ನ ಅವರ ಕೃಷಿ ಸ್ಥಳದಲ್ಲಿ ಕೆಲಸಗಾರರಾಗಿದ್ದ ಯೋಗೀಶ್ ಪಿ. ಅವರ ಆಕಸ್ಮಿಕ ಮರಣ ಪರಿಹಾರವಾಗಿ ಸಹಾಯಧನದ ಮೊತ್ತ 50,000 ರೂ. ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಯೋಗೀಶ್ ಪಿ. ಅವರ ತಾಯಿ ಮೀನಾಕ್ಷಿ ಅವರಿಗೆ ಹಸ್ತಾಂತರಿಸಿದರು.
ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿ, ಕ್ಯಾಂಪ್ಕೊ ಸುಳ್ಯ ಶಾಖೆಯಲ್ಲಿ ಪ್ರಪ್ರಥಮವಾಗಿ ಸದಸ್ಯರ ಕೃಷಿ ಸ್ಥಳದಲ್ಲಿ ಆಕಸ್ಮಿಕ ಮರಣ ಹೊಂದಿದ ಕೆಲಸಗಾರರಿಗೆ ಪರಿಹಾರ ನೀಡಲಾಗಿದೆ. ರೈತರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಂಪ್ಕೊ ಸಂಸ್ಥೆಗೆ ಅಡಿಕೆ ವ್ಯವಹಾರ ನಡೆಸುವ ಮೂಲಕ ಕ್ಯಾಂಪ್ಕೋ ದಲ್ಲಿ ದೊರೆಯುವ ವಿವಿಧ ವಿಶೇಷ ಪ್ರಯೋಜನಗಳ ಬಗ್ಗೆ ಅರಿತು ಅದರ ಸದುಪಯೋಗವನ್ನು ಪಡೆಯಬೇಕೆಂದು ವಿನಂತಿಸಿದರು.
ಕ್ಯಾಂಪ್ಕೋ ಸದಸ್ಯ, ಆರ್‌ಎಸ್‌ಎಸ್ ಸಹ ಸಂಘಚಾಲಕ ಪ್ರದ್ಯುಮ್ನ,ಸುಳ್ಯ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಧರ, ಪ್ರಧಾನ ಕಾರ್ಯದರ್ಶಿ ನಾರಾಯಣ ಯಸ್.ಎಂ. , ಆರ್ ಎಸ್ ಎಸ್ ಐವರ್ನಾಡು ಮಂಡಲ ಪ್ರಮುಖ್ ಅವಿನ್ ಕುಮಾರ್ ಪಿ. ಸುಳ್ಯ ಬಿಜೆಪಿ ಕಾರ್ಯಾಲಯದ ಚಂದ್ರಶೇಖರ ನೆದಿಲಾ, ಬಿಜೆಪಿ ಹಿರಿಯ ಕಾರ್ಯಕರ್ತ ಕೆ ಕೆ. ಬಾಲಕೃಷ್ಣ, ಉಬರಡ್ಕ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ರೈ, ಕ್ಯಾಂಪ್ಕೋ ಪ್ರಾದೇಶಿಕ ಕಚೇರಿ ಸೀನಿಯರ್ ಮ್ಯಾನೇಜರ್ ಪ್ರಕಾಶ್ ಕುಮಾರ್ ಶೆಟ್ಟಿ, ಕ್ಯಾಂಪ್ಕೋ ಸುಳ್ಯ ಶಾಖೆಯ ಪ್ರಬಂಧಕ ವಿನೋದ್ ಕುಮಾರ್ ಎ., ಸೀನಿಯರ್ ಮ್ಯಾನೇಜರ್ ಸಂತೋಷ್ ಪಿ. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.