ಹಿರಿಯ ಪತ್ರಕರ್ತ ಈಚನೂರು ಕುಮಾರ್  ನಿಧನ

ಮೈಸೂರು : ಹಿರಿಯ ಪತ್ರಕರ್ತ, ಇತಿಹಾಸ ತಜ್ಞ ಈಚನೂರು ಕುಮಾ‌ರ್ ನಿಧನರಾದರು.

ವಯೋಸಹಜ ಅನಾರೋಗ್ಯದಿಂದ ಬಳಲಿದ್ದ ಅವರು ಶನಿವಾರ (ಜು.20) ಬೆಳಗ್ಗೆ 11:30ರ ವೇಳೆಗೆ ಮೈಸೂರಿನ ನಿವಾಸದಲ್ಲಿ ಕೊನೆಯುಸಿರೆಳೆದರು.

ಅವರಿಗೆ ಪತ್ನಿ, ಪುತ್ರಿ ಅಕ್ಷರಾ, ಪುತ್ರ ಅಜಿತ್ ಇದ್ದಾರೆ. ಮಕ್ಕಳಿಬ್ಬರೂ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.









































 
 

ಸುಮಾರು ಐದು ದಶಕಗಳಿಂದ ಪತ್ರಕರ್ತರಾಗಿದ್ದ ಈಚನೂರು ಕುಮಾ‌ರ್ ಅಪಾರ ಅನುಭವ ಹೊಂದಿದ್ದರು. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಈಚನೂರಿನವರಾದ ಕುಮಾರ್ ಮೈಸೂರಿನಲ್ಲೇ ಬಹುಕಾಲದಿಂದ ವಾಸವಾಗಿದ್ದರು.

ಲೋಕವಾಣಿ, ನವಧ್ವನಿ, ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂ‌ರ್, ಕನ್ನಡಪ್ರಭ, ಮಹಾನಂದಿ, ಮೈಸೂರು ಪತ್ರಿಕೆ, ಪ್ರಜಾನುಡಿ, ಡೆಕ್ಕನ್ ನ್ಯೂಸ್ ಪತ್ರಿಕೆಗಳಲ್ಲಿ ವರದಿಗಾರಿಕೆ, ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಜಾವಾಣಿ, ವಿಕ್ರಮ, ಹೊಸದಿಗಂತ ಮೊದಲಾದ ಪತ್ರಿಕೆಗಳಲ್ಲಿ ಅವರ ಬರಹ ಪ್ರಕಟವಾಗಿದೆ.

ಭಾರತ ಸಂವಿಧಾನ ಕುರಿತು ವಿಶೇಷ ಲೇಖನಗಳು, ಮೈಸೂರು ನಗರದ ಪ್ರಮುಖ ಕಟ್ಟಡ, ಸಂಸ್ಥೆ, ವ್ಯಕ್ತಿಗಳ ಬಗ್ಗೆ ಲೇಖನಗಳು. ರೀಡಿಂಗ್ಸ್ ಇನ್‌ದಿ ಹಿಸ್ಟರಿ ಆಫ್ ಮೈಸೂರ್ ಸರಣಿ ಲೇಖನಗಳು, ಮೊದಲ ಮಹಾಯುದ್ಧದಲ್ಲಿ ಮೈಸೂರು ಪಾತ್ರ ಕುರಿತ ವಿಶೇಷ ಲೇಖನಗಳು, ಮೈಸೂರಿನ ಪಾರಂಪರಿಕ ಕಟ್ಟಡಗಳ ವೀಕ್ಷಕ ವಿವರಣೆ, ಪಾರಂಪರಿಕ ನಡಿಗೆ 2004 ರಿಂದ ಪ್ರತಿವರ್ಷ ಸುಮಾರು 1500 ತಂಡಗಳಿಗೆ ಮಾರ್ಗದರ್ಶಿಯಾಗಿದ್ದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು ವರದಿಗಾರರ ಒಕ್ಕೂಟ ಪ್ರಶಸ್ತಿ, ಜೆಎಸ್‌ಎಸ್‌ ಮಾಧ್ಯಮ ಪ್ರಶಸ್ತಿ, ವಿಶ್ವ ಸಂವಾದ ಕೇಂದ್ರದಿಂದ ತಿ.ತಾ.ಶರ್ಮ ಮಾಧ್ಯಮ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಮೈಸೂರಿನ ಪಾರಂಪರಿಕ ತಾಣಗಳು, ಚರಿತ್ರೆ ಚಂದ್ರಿಕೆ, ನಾಡಿಗಾಗಿ ದುಡಿದವರು, ಸಹಕಾರ ಕಂಠೀರವ ನರಸಿಂಹರಾಜ ಒಡೆಯ‌ರ್, ಮೈಸೂರಿನ ರಾಜ ಮಹಾರಾಜರು(ನಿನ್ನೆಯ ಕಣ್ಣು- ನಾಳೆಯ ನೋಟ), ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗದಿಂದ ವಿಶ್ವವಿದ್ಯಾನಿಲಯದ ನೂರು ವರ್ಷದ ಇತಿಹಾಸ ಈಚನೂರು ಕುಮಾರ್ ಅವರ ಪ್ರಕಟಿತ ಕೃತಿಗಳು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top