ಕುಮಾರಧಾರ ನದಿಯಲ್ಲಿ ಯುವಕನ ಮೃತದೇಹ ಪತ್ತೆ

ಕಾಣಿಯೂರು : ಕಡಬ ತಾಲೂಕಿನ ಕಾಯಿಮಣ ಗ್ರಾಮದ ನಾಯಿತಡ್ಕ ಎಂಬಲ್ಲಿಂದ ನಾಪತ್ತೆಯಾಗಿದ್ದ ಸುರೇಶ್(40ವ.)ಅವರ ಶವ ಶುಕ್ರವಾರ ಸಂಜೆ ಕುಮಾರಾಧಾರ ನದಿಯಲ್ಲಿ ಪತ್ತೆಯಾಗಿದೆ.

ಅವಿವಾಹಿತರಾಗಿದ್ದ ಸುರೇಶ್ ಜು.15ರ ರಾತ್ರಿ ಮನೆಯಿಂದ ಹೊರಟು ಹೋದವರು ನಾಪತ್ತೆಯಾಗಿದ್ದರು.

ಇತ್ತೀಚೆಗೆ ಈತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಮೃತನ ಸಹೋದರ ಚಿದಾನಂದ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು.ಪ್ರಕರಣ ದಾಖಲಾಗಿತ್ತು.ಸುರೇಶ್ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಅವರ ಶರ್ಟ್ ಹಾಗೂ ಛತ್ರಿ ಕಾಪೆಜಾಲು ಹೊಳೆ ಬದಿಯಲ್ಲಿ ಪತ್ತೆಯಾಗಿತ್ತು.ಆತ ಹೊಳೆಗೆ ಬಿದ್ದು ನೆರೆ ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎನ್ನುವ ಶಂಕೆಯಲ್ಲಿ ಅಗ್ನಿ ಶಾಮಕದಳದವರು ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರು.ಬುಧವಾರ ಕೂಡಾ ಶೋಧ ಕಾರ್ಯ ನಡೆಸಲಾಗಿತ್ತು.ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಮತ್ತು ನೀರಿನ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಕೈ ಬಿಡಲಾಗಿತ್ತು.ಶುಕ್ರವಾರ ಇಳಿ ಸಂಜೆ ಹೊತ್ತಿಗೆ ಕಾಪೆಜಾಲು ಹೊಳೆ ಕುಮಾರಧಾರ ನದಿಗೆ ಸೇರುವ ಜಾಗದಲ್ಲಿ ಪೊದೆಯಲ್ಲಿ ಶವ ಪತ್ತೆಯಾಗಿದೆ.



































 
 

ಸ್ಥಳೀಯರು ಶವವನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಬಳಿಕ ಶವವನ್ನು ಮೇಲೆತ್ತಲಾಗಿದೆ.ಸ್ಥಳಕ್ಕೆ ಬೆಳ್ಳಾರೆ ಪೊಲೀಸ್‌ ಠಾಣಾ ಎಸೈ ಸಂತೋಷ್ ಹಾಗೂ ಸಿಬ್ಬಂದಿಗಳು ಆಗಮಿಸಿ ಮಹಜರು ನಡೆಸಿದರು. ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ, ಪಿಡಿಓ ನಾರಾಯಣ್, ಗ್ರಾಮ ಆಡಳಿತಾಧಿಕಾರಿ ಪುಷ್ಪರಾಜ್, ಗ್ರಾ.ಪಂ. ಸದಸ್ಯರಾದ ಮೋಹನ್ ಅಗಳಿ, ಪ್ರವೀಣ್‌ ಕೆರೆನಾರು, ಉಮೇಶ್ವರಿ ಅಗಳಿ, ಗ್ರಾಮ ಸಹಾಯಕರಾದ ಪ್ರೀತಮ್ ಬೆಳಂದೂರು, ಯೋಗೀಶ್ ಕುದ್ಮಾರು ಈ ಸಂದರ್ಭದಲ್ಲಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top