ಪಂಜ : ಭಾರೀ ಮಳೆಯಿಂದ ಜು.19 ರಂದು ಮುಂಜಾನೆಯಿಂದ ಪಂಜ ಹೊಳೆ ತುಂಬಿ ಹರಿಯುತ್ತಿದ್ದು, ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಗೆ ಹೊಳೆಯ ನೆರೆ ನೀರು ಆವರಿಸಿದೆ. ಹೊಳೆ ಸಮೀಪದ ಕೃಷಿ ತೋಟದಲ್ಲಿ ನೆರೆ ನೀರು ನುಗ್ಗಿದೆ.
ಬೊಳ್ಳಲೆ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆಗೊಂಡಿದೆ. ಪರಿಣಾಮವಾಗಿ ಕಿಂಡಿ ಅಣೆಕಟ್ಟು ಮೇಲಿರುವ ಬಸ್ತಿಕಾಡು ಪ್ರದೇಶದ ಅನೇಕ ಮನೆಗಳಿಗೆ ಸಂಪರ್ಕಿಸುವ ರಸ್ತೆ ಕಡಿತಗೊಂಡಿದೆ.
ಮುಂಜಾಗ್ರತಾ ಕ್ರಮವಾಗಿ ಈ ರಸ್ತೆ ಸಂಚಾರ ಸ್ಥಗಿತಗೊಳಿಸಿದರುವುದಾಗಿ ಬ್ಯಾರಿಕೇಡ್ ಹಾಕಿ ಬ್ಯಾನರ್ ಅಳವಡಿಸಲಾಗಿದೆ. ಇದೀಗ ನೀರಿನ ಹರಿವು ಹೆಚ್ಚಾಗಿದ್ದು ಬೊಮ್ಮಲೆಯಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ನೀರು ಆವರಿಸಿದೆ.
ಸ್ಥಳಕ್ಕೆ ಗ್ರಾಮ ಪಂಚಾಯತ್ ಯವರು, ಕಂದಾಯ ಇಲಾಖೆಯವರು, ಅರಣ್ಯ ಇಲಾಖೆಯವರು ಭೇಟಿ ನೀಡಿದ್ದಾರೆ. ಮುಂಜಾನೆ ಜೆಸಿಬಿ ಮೂಲಕ ಕಿಂಡಿ ಕಟ್ಟಿನಲ್ಲಿ ಸಿಲುಕಿದ ಮರಗಳತೆರವು ಕಾರ್ಯ ನಡೆಯಿತು.