ಪುತ್ತೂರು ಕಬಕ-ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಆಗಬೇಕಾದ ಕೆಲವೊಂದು ಅಗತ್ಯ ಕಾಮಗಾರಿಗಳ ಕುರಿತು ಮನವಿಯನ್ನು ಮಾಜಿ ಶಾಸಕ ಸಂಜೀವ ಮಠಂದೂರು ರಾಜ್ಯ ರೈಲ್ವೇ ಸಚಿವ ವಿ.ಸೋಮಣ್ಣ ಅವರಿಗೆ ಸಲ್ಲಿಸಿದರು.
ರೈಲ್ವೆ ನಿಲ್ದಾಣ ಹಾಗೂ ರೈಲ್ವೆ ಮಾರ್ಗದ ಅಗತ್ಯ ಕೆಲಸಗಳ ಬಗ್ಗೆ ಈ ಕೆಳಗಿನ ಅಗತ್ಯ ಕೆಲಸಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ.
ಕಬಕ ಪುತ್ತೂರು ಆದರ್ಶ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂಗೆ ಮಳೆ ಹಾಗೂ ಬಿಸಿಲಿಗೆ ರಕ್ಷಣೆ ನೀಡಲು ಶೆಲ್ಮರ್ ವ್ಯವಸ್ಥೆ, ಸಿ ಸಿ ಟಿವಿ ವ್ಯವಸ್ಥೆ, ವಿದ್ಯುತ್ ಹೋದಾಗ ಜನರೇಟರ್ ವ್ಯವಸ್ಥೆ, ಪ್ರಯಾಣಿಕ ರೈಲು ಕೇವಲ 2 ನಿಮಿಷ ತಂಗುವ ಬದಲು ಕನಿಷ್ಠ 5 ನಿಮಿಷ ತಂಗುವ ವ್ಯವಸ್ಥೆ ಆಗಬೇಕು, ಮಂಗಳೂರು-ಕಬಕ-ಪುತ್ತೂರು ಬೆಳಿಗ್ಗೆ 6.40ಕ್ಕೆ ಬರುವ ಪ್ರಯಾಣಿಕ ರೈಲನ್ನು ಸುಬ್ರಹ್ಮಣ್ಯ ತನಕ ವಿಸ್ತರಣೆ ಮಾಡಬೇಕು, ವುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸಾಮೆತ್ತಡ್ಕ ಹಾಗೂ ಪುತ್ತೂರು ಕ್ಲಬ್ ಇಲ್ಲಿರುವ ರೈಲು ಕ್ರಾಸಿಂಗ್ ಗೆ ಓವರ್ ಬ್ರಿಡ್ಜ್ ಅಥಾವ ಅಂಡರ್ ಬ್ರಿಡ್ಜ್ ಮಾಡಬೇಕು ಎಂಬ ಬೇಡಿಕೆಗಳಲ್ಲಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.