ಪುತ್ತೂರು : ಸೂಫಿ ಪಂಥದ ಆದ್ಯಾತ್ಮಿಕ ವ್ಯಕ್ತಿ ಅಲ್‌ಹಾಜ್ ಸಯ್ಯಿದ್ದ ಅಬೂಬಕ್ಕರ್ ತಂಙಳ್ ಅಲ್‌ಹಾದಿ ಕೆಮ್ಮಾಯಿ ಅವರ ನಿವಾಸದಲ್ಲಿ ಜರಗುವ ಜಲಾಲಿಯ್ಯ ಇದರ ಪ್ರಥಮ ವಾರ್ಷಿಕದ ಪ್ರಯುಕ್ತ `ಬುರ್ದಾ ಹಾಗು ಜಲಾಲಿಯ್ಯ ಮಜ್ಲಿಸ್’ ಫೆ.8 ಮತ್ತು 9 ರಂದು ಕೆಮ್ಮಾಯಿ ತಂಙಳ್ ನಿವಾಸದಲ್ಲಿ ನಡೆಯಲಿದೆ ಎಂದು ಬುಸ್ತಾನುಲ್ ಬಾದುಷ ಜಲಾಲಿಯ್ಯ ಸಮಿತಿ ಸಂಚಾಲಕ ಇಸಾಕ್ ಸಾಲ್ಮರ ತಿಳಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ.8ರಂದು ರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ಅಲ್‌ಹಾಜ್ ಸಯ್ಯಿದ್ದ ಮುಹಮ್ಮದ್ ಅಲ್‌ಹಾದಿ ತಂಙಳ್ ಸಾಲ್ಮರ ದುವಾ ನೆರವೇರಿಸಲಿದ್ದಾರೆ. ಬುಸ್ತಾನುಲ್ ಬಾದುಷ ಜಲಾಲಿಯ್ಯ ಸಮಿತಿ ಕೋಶಾಧಿಕಾರಿ ಮೂಸಾ ಹಾಜಿ ಕೆಮ್ಮಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಲ್ಮರ ಸಯ್ಯಿದ್‌ಮಲೆ ಖತೀಬ್ ಉಮ್ಮರ್ ದಾರಿಮಿ ಉದ್ಘಾಟಿಸಲಿದ್ದಾರೆ. ಕಲ್ಲೇಗ ಮಸೀದಿ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಹಾಫಿಳ್ ಅನ್ವರ್ ಸಖಾಫಿ ಶಿರಿಯ ಮತ್ತು ಸಂಗಡಿಗರು ಬುರ್ದಾ ಆಲಾಪನೆ ಮಾಡಲಿದ್ದಾರೆ. ಶೈಖುನಾ ವಾಲೆಮುಂಡೋವು ಉಸ್ತಾದ್ ಸಮಾರೋಪ ದುವಾ ನೆರವೇರಿಸಲಿದ್ದಾರೆ.
ಫೆ.9ರಂದು ಸಂಜೆ ಅಜ್ಮೀರ್ ಮೌಲಿದ್ ಹಾಗೂ ಏರ್ವಾಡಿ ಶುಹದಾ ಮೌಲಿದ್ ನಡೆಯಲಿದ್ದು, ಅಲ್ ಹಾಜ್ ಸಯ್ಯಿದ್ ಅಬೂಬಕ್ಕರ್ ಅಲ್‌ಹಾದಿ ತಂಙಳ್ ಕೆಮ್ಮಾಯಿ ನೇತೃತ್ವ ವಹಿಸಲಿದ್ದಾರೆ. ಸಯ್ಯಿದ್ದ ಯಹ್ಯಾ ಅಲ್‌ಹಾದಿ ತಂಙಳ್ ಸಾಲ್ಮರ ದುವಾ ನೆರವೇರಿಸಲಿದ್ದಾರೆ. ಬುಸ್ತಾನುಲ್ ಬಾದುಷ ಜಲಾಲಿಯ್ಯ ಸಮಿತಿ ಅಧ್ಯಕ್ಷ ಪುತ್ತು ಹಾಜಿ ಬಾಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಮ್ಮಾಯಿ ಮಸೀದಿ ಮುದರ್ರಿಸ್ ಇರ್ಷಾದ್ ಸಖಾಫಿ ಬೊಳ್ಳಾಯಿ ಉದ್ಘಾಟಿಸಲಿದ್ದಾರೆ. ಬನ್ನೂರು ಮಸೀದಿ ಖತೀಬ್ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಸಯ್ಯಿದ್ ಇಬ್ರಾಹಿಂ ಖಲೀಮುಲ್ಲಾಹ್ ತಂಙಳ್ ಅಲ್‌ಖಾದ್ರಿ ನಾಗೂರಿ ನೇತೃತ್ವದಲ್ಲಿ ಜಲಾಲಿಯ್ಯ ನಡೆಯಲಿದೆ. ಸಯ್ಯಿದ್ ಇಬ್ರಾಹಿಂ ಬಾದುಷಾ ತಂಙಳ್ ಆನೆಕಲ್ ಸಮಾರೋಪದ ದುವಾ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಸ್ತಾನುಲ್ ಬಾದುಷ ಜಲಾಲಿಯ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಯೂಸುಫ್ ತಾರಿಗುಡ್ಡೆ, ಕೋಶಾಧಿಕಾರಿ ಮೂಸಾ ಹಾಜಿ ಕೆಮ್ಮಾಯಿ, ಸದಸ್ಯ ಅಬ್ದುಲ್ ರಹಿಮಾನ್ ಹಾಜಿ ಅರಮನೆ ಮತ್ತು ಪ್ರವರ್ತಕ ಅಬ್ದುಲ್ ರಹಿಮಾನ್ ಬಿ.ಸಿ.ರೋಡ್ ಉಪಸ್ಥಿತರಿದ್ದರು.