ಪುತ್ತೂರು: ಆಲಡ್ಕಶ್ರೀ ಸದಾಶಿವ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಮುಖ್ಯ ಗೇಟ್ ಮತ್ತು ಪುಷ್ಪವನದ ಉದ್ಘಾಟನೆ ಇಂದು ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸಿ ಮಾತನಾಡಿ, ಆಲಡ್ಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಇದರಲ್ಲಿ ಉಳಿಕೆಯಾದ ಹಣವನ್ನು ದೇವಸ್ಥಾನದ ಕಾರ್ಯಕ್ಕೆ ಬಳಕೆ ಮಾಡಲಾಗಿದೆ. ಆಲಡ್ಕ ದೇವಸ್ಥಾನದಲ್ಲಿರುವ ವ್ಯವಸ್ಥಾಪನಾ ಸಮಿತಿ ಮತ್ತು ಭಕ್ತರು ಹಾಗೂ ಬ್ರಹ್ಮಕಲಶ ಸಮಿತಿ ಉತ್ತಮ ಕೆಲಸ ಮಾಡಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಇಲ್ಲಿನ ಪ್ರತೀಯೊಂದು ಸಮಿತಿಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿ ಕೆಲಸ ಮಾಡಿರುವುದರಿಂದ ಇಂದು ದೇವಸ್ಥಾನಕ್ಕೂ ಸಮಿತಿಗೂ ಉತ್ತಮ ಹೆಸರು ಇದೆ. ಬ್ರಹ್ಮಕಲಶೋತ್ಸವ ಸಂದರ್ಭದ ಎಲ್ಲಾ ವಿಚಾರಗಳು ಇಲ್ಲಿ ಪಾರದರ್ಶಕವಾಗಿ ನಡೆದಿದ್ದು ಇದು ಎಲ್ಲ ಭಕ್ತರಿಗೂ ತಿಳಿದ ವಿಚಾರವಾಗಿದೆ ಮುಂದೆ ಇಲ್ಲಿಇನ್ನಷ್ಟು ಅಭಿವೃದ್ದಿ ಕಾರ್ಯಗಳು ನಡೆಯಲಿ ಎಂದು ಹೇಳಿದರು.
ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಅರುಣ್ ಆಳ್ವ ಬೋಳೋಡಿ ಅಧ್ಯಕ್ಷತೆ ವಹಿಸಿದ್ದರು. ನಿಕಟ ಪೂರ್ವ ಸಮಿತಿ ಸದಸ್ಯರಾದ ವಿಶ್ವನಾಥ ರೈ ಕುಕ್ಕುಂಜೋಡು, ಭಾಸ್ಕರ ರೈ ಕೆದಂಬಾಡಿ ಗುತ್ತು, ಸದಾಶಿವ ರೈ ಪೊಟ್ಟಮೂಲೆ, ಜಯಲಕ್ಷ್ಮಿ, ಪ್ರಕಾಶ್ ಪುತ್ತೂರಾಯ, ರುಕ್ಮಯ ನಾಯ್ಕ್, ಬಾಳಯ ,ರಾಮಯ್ಯ ರೈ ತಿಂಗಳಾಡಿ, ರವಿರಾಜ್ ರೈ ಕೆದಂಬಾಡಿ, ಪುರಂದರ್ ರೈ ಕೋರಿಕ್ಕಾರ್, ವಿಠಲ್ ರೈ ಬೋಳೋಡಿ, ಉಮಾನಾಥ ಶೆಟ್ಡಿ ಬೋಳೋಡಿ, ಹರ್ಷಿತ್ ರೈ ಕುಕ್ಕುಂಜೋಡು, ಪ್ರಮೋದ್ ಕುಮಾರ್ ಆಳ್ವ, ಶಂಕರ ಕಡ್ಯ, ಸದಾಶಿವ ಮಹಿಳಾ ಸೇವಾ ಸಮಿತಿಯ ಶೋಭಾ, ಅನಿತಾ ಅರುಣ್ ಆಳ, ಸ್ವಪ್ನಾ ಪುತ್ತೂರಾಯ ,ಉಮೇಶ್ ನಾಯ್ಕ, ಸುಂದರ ಬಾಳಯ, ರಾಮಕೃಷ್ಣ ರೈ ಕುಕ್ಕುಂಜೋಡು, ರಂಜಿತ್ ರೈ, ವಿಠಲ್ ರೈ ಬೋಳೋಡಿ, ಲೋಕೇಶ್ ನಾಯ್ಕ, ಅಶೋಕ್ ನಾಯ್ಕ,ಸುಪ್ರಿತ್ ಕಣ್ಣಾರಾಯ ಉಪಸ್ಥಿತರಿದ್ದರು.
ದನಂಜಯ ಕುಲಾಲ್ ಸ್ವಾಗತಿಸಿದರು. ಆಡಳಿತ ಅಧಿಕಾರಿ ಜಯಪ್ರಸಾದ್ ರೈ ವಂದಿಸಿದರು.