ಮಂಗಳೂರು: ರಾಹುಲ್ ಗಾಂಧಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಶಾಸಕ ಭರತ್ ಶೆಟ್ಟಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕಾವೂರು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿದ್ದರ ಪರಿಣಾಮ ಹಲವಾರು ಮಂದಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಇಂದು ನಡೆದಿದೆ.
ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದಾಗ ರಸ್ತೆ ತಡೆಯಲ್ಲಿ ನಿರತರಾದರು. ತಕ್ಷಣ ನೂರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಮಾತನಾಡಿ, ಬಿಜೆಪಿಯ ಇಂದಿನ ಮುಖಂಡರು ಪಕ್ಷದ ಹಿಂದಿನ ಶ್ರೇಷ್ಠ ಮುಖಂಡರ ಆದರ್ಶ ಪಾಲಿಸಲಿ ಎಂದು ಆಗ್ರಹಿಸಿದರು.
ಕೆಪಿಸಿಸಿ ವಕ್ತಾರ ಎಂಜಿಹೆಗಡೆ,ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಮಾತನಾಡಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಾಂಬ್ಳಿ,ಪಕ್ಷದ ಮುಂದಾಳುಗಳಾದ ಶಶಿಧರ್ ಹೆಗ್ಡೆ,:ಪಾಲಿಕೆ ಸದಸ್ಯರಾದ ಅನಿಲ್ ಕುಮಾರ್, ಕಿಶೋರ್ ಶೆಟ್ಟಿ, ಜಯಲಕ್ಷ್ಮಿ,ಗುರುಪುರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಜಯಾ ,ಹಾಗೂ ಮಾಜಿಪಾಲಿಕೆ ಸದಸ್ಯರಾದ ಬಶೀರ್ ಬೈಕಂಪಾಡಿ, ನಾಗವೇಣಿ, ಬ್ಲಾಕ್ ಮಾಜಿ ಅಧ್ಯಕ್ಷ ಕೇಶವ ಸನಿಲ್,ಕೆ.ಸದಾಶಿವ ಶೆಟ್ಟಿ,ಶ್ರೀಕಾಂತ್ ಗುಡ್ಡೆಕೊಪ್ಲ,ಹರೀಶ್ ಮೀನಕಳಿಯ, ಶಾಂತಾ ತಡಂಬೈಲ್, ಚಂದ್ರಹಾಸ ಪೂಜಾರಿ, ಶಕುಂತಳಾ ಕಾಮತ್, ಶಾಲಿನಿ ಮತ್ತಿತರರು ಭಾಗವಹಿಸಿದ್ದರು.