ಬಂಟ್ವಾಳ : ಬಂಟ್ವಾಳ ತಾಲೂಕಿನ ಕುಳ-ವಿಟ್ಲ ಮುಡ್ನೂರು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಹಾಗೂ ಮಾಡ ಶ್ರೀ ಮಲರಾಯ-ಮೂವರ್ ದೈವಂಗಳ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ.13 ಹಾಗೂ 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಫೆ.13 ಸೋಮವಾರ ಬೆಳಿಗ್ಗೆ 8.30 ಕ್ಕೆ ಕುಂಡಡ್ಕ ಶ್ರೀ ವಿಷ್ಣುಮೂತಿ‍್ ದೇವರ ಮೂಲಸ್ಥಳ ಕುಂಡಡ್ಕ ಬಡಿಕೆರೆಯಿಂದ ಕಲಶ ತರುವುದು. 9 ಗಂಟೆಗೆ ಕಂಪ ಬನತ್ತಡಿ ಶ್ರೀ ನಾಗದೇವರ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಹಾಲಾಭಿಷೇಕ, ತಂಬಿಲ ಮತ್ತು ಆಶ್ಲೇಷ ಬಲಿ ನಡೆಯುವುದು.
ಬಳಿಕ ನವಕ ಪ್ರಧಾನ ಕಲಶ, ಗಣಪತಿ ಹೋಮ, 9.30 ಕ್ಕೆ ಮಾತೆಯರಿಂದ ಕುಂಕುಮಾರ್ಚನೆ, 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 6 ಕ್ಕೆ ಶ್ರೀ ದುರ್ಗಾಪೂಜೆ, 7ಕ್ಕೆ ನಿತ್ಯಪೂಜೆ, ಶ್ರೀ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ರಾತ್ರಿ 8.30 ಕ್ಕೆ ಶ್ರೀ ದೇವರ ಬಲಿ ಉತ್ಸವ, ಕಟ್ಟೆಪೂಜೆ ಜರಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೂಲ್ಕಿ ಕೆರೆಕಾರು ಶ್ರೀ ವಿನಾಯಕ ಯಕ್ಷ ಕಲಾ ತಂಡದವರಿಂದ “ಮಹಾಶೂರ ಭಾನು ನಂದನ” ಯಕ್ಷಗಾನ ಬಯಲಾಟ ನಡೆಯಲಿದೆ.
ಫೆ.14 ಮಂಗಳವಾರ ಬೆಳಿಗ್ಗೆ 9.30 ಕ್ಕೆ ಶ್ರೀ ದೇವರ ಬಲಿ ಉತ್ಸವ, 11 ಕ್ಕೆ ದರ್ಶನಬಲಿ, ಬಟ್ಟಲು ಕಾಣಿಕೆ, 12 ಕ್ಕೆ ಮಹಾಮಂಗಳಾರತಿ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.