ಪುತ್ತೂರು : ಬನ್ನೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪೋಷಕರ ಸಭೆಯು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದರು. ಶಾಲೆಯ ಶೈಕ್ಷಣಿಕ ವಿಚಾರಗಳ ಬಗ್ಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ ಮಾತನಾಡಿ, ಬೆಳೆಯುತ್ತಿರುವ ಎವಿಜಿ ಶಾಲೆಯಲ್ಲಿ ಈ ವರ್ಷ ಶಾಲಾ ಕೊಠಡಿ, ಆಟದ ಮೈದಾನ, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಶೌಚಾಲಯ, ಕಂಪ್ಯೂಟರ್ ಹಾಗೂ ಲೈಬ್ರರಿ ಕೊಠಡಿಗಳು ನಿರ್ಮಾಣವಾಗಿದ್ದು ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ಎರಡು ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ. ಶಾಲೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಶಿಕ್ಷಕ ವೃಂದ ಎಷ್ಟು ಮುಖ್ಯವೋ, ಪೋಷಕ ವೃಂದವು ಅಷ್ಟೇ ಪ್ರಾಮುಖ್ಯ, ಇವೆಲ್ಲವೂ ಶಾಲೆಯ ಬೆಳವಣಿಗೆಯ ಆಧಾರ ಸ್ತಂಭಗಳು ಎಂದು ಹೇಳಿದರು.
ಸಂಸ್ಥೆಯ ಸಂಚಾಲಕ ಎ.ವಿ ನಾರಾಯಣ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿ, ಎಲ್ಲರ ಪಾಲ್ಗೊಳ್ಳುವಿಕೆಯನ್ನು ಕೇಳಿಕೊಂಡರು.
ಶಿಕ್ಷಕಿ ಯಶುಭ ರೈ ಸ್ವಾಗತಿಸಿ, ಪಠ್ಯ ಹಾಗೂ ಪಠ್ಯೇತರ ವಿಷಯದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ, ಪೋಷಕರು ಚರ್ಚೆಯಲ್ಲಿ ಪಾಲ್ಗೊಂಡು ಶಾಲೆ ಹಾಗೂ ತಮ್ಮ ಮಕ್ಕಳ ಅಭಿವೃದ್ಧಿಗೆ ಸಹಕರಿಸಬೇಕಾಗಿ ತಿಳಿಸಿದರು.
ಸಭೆಯಲ್ಲಿ ಬೋಧಕ, ಬೋಧಕೇತರ ವೃಂದದವರು, ಆಡಳಿತ ಮಂಡಳಿಯವರು, ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡಿದ್ದರು.
ಶಾಲಾ ಶಿಕ್ಷಕಿ ಹರ್ಷಿತ ಪ್ರಾರ್ಥನೆ ಹಾಡಿದರು. ಶಾಲಾ ಉಪಾಧ್ಯಕ್ಷ ಉಮೇಶ್ ಗೌಡ ಮಳುವೇಲು ವಂದಿಸಿದರು.