ನವದೆಹಲಿ: ದೇಶದಲ್ಲಿ ಇಂದಿನಿಂದ ಕಾನೂನು ಬದಲಾಗಲಿದ್ದು, ಬ್ರಿಟೀಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ, ಸಿ.ಆರ್.ಪಿ.ಸಿ ಇಂಡಿಯನ್ ಎವಿಡೆನ್ಸ್ ಆಕ್ಟ್ ಗೆ ಗುಡ್ ಬೈ ಹೇಳಲಾಗುತ್ತದೆ.
ಐಪಿಸಿ ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ ಸಿ.ಆರ್.ಪಿ.ಸಿ ಜಾಗದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಇಂಡಿಯನ್ ಎವಿಡೆನ್ಸ್ ಆಕ್ಟ್ ಜಾಗದಲ್ಲಿ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ಬರುತ್ತಿದೆ.
ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯಲ್ಲಿ 1860ರಲ್ಲಿ ಜಾರಿ ಮಾಡಿದ್ದ ಐಪಿಸಿ ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಎಂದು, 1898ರಲ್ಲಿ ಜಾರಿಗೆ ಬಂದಿದ್ದ ಸಿ.ಆರ್.ಪಿ.ಸಿ ಬದಲಿಗೆ ಭಾರತೀಯ ನಾಗರಿಕ ರಕ್ಷಣಾ ಸಂಹಿತೆ ಎಂದು ಹಾಗೂ 1872ರಲ್ಲಿ ಬಂದಿದ್ದ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲಾಗಿ ಭಾರತೀಯ ಸಾಕ್ಷ್ಯ ಕಾಯ್ದೆ ಎಂದು ಮಾಡಲಾಗಿದೆ.
ನೂತನ ಕಾನೂನು:
• ಭಾರತೀಯ ನ್ಯಾಯ ಸಂಹಿತೆ
• ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ
• ಭಾರತೀಯ ಸಾಕ್ಷ್ಯ ಕಾಯ್ದೆ
ಈ ಮೂರು ಹೊಸ ಕಾಯ್ದೆಗೆ ಕಳೆದ ವರ್ಷ ಸಂಸತ್ ನಲ್ಲಿ ಅನುಮೋದನೆ ದೊರೆತಿತ್ತು. ಡಿಸೆಂಬರ್ 25 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಸೂದೆಗಳಿಗೆ ಅಂಕಿತ ಹಾಕಿದ್ದಾರೆ. ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಮಾತ್ರ ಸದ್ಯಕ್ಕೆ ಜಾರಿಗೊಳಿಸದೆ ಇರಲು ಸರ್ಕಾರ ನಿರ್ಧಾರ ಮಾಡಲಾಗಿದೆ.