ಕಡಬ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ ಗುರುವಾರ ಆಚರಿಸಲಾಯಿತು.
ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಪ್ರಧಾನ ಭಾಷಣ ಮಾಡಿ, ಬೆಂಗಳೂರಿನ ನಿರ್ಮಾತೃ ನಾಡಪ್ರಭು ತನ್ನ ದೂರದೃಷ್ಟಿತ್ವದಿಂದ ಬೆಂಗಳೂರನ್ನು ಕಟ್ಟಿ ಸುಂದರ ನಗರವನ್ನಾಗಿ ಮಾಡಿದ್ದಾರೆ. ಅವರ ಆಡಳಿತ ಇಂದು ಜನಮಾನಸದಲ್ಲಿ ಪ್ರಸ್ತುತ ಎನಿಸಿದೆ. ಅವರ ಕಂಚಿನ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದಲ್ಲದೆ, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಡಲಾಗಿದೆ. ವಿಜಯನಗರದ ವೈಭವವನ್ನು ಬೆಂಗಳೂರಿನಲ್ಲೂ ಸ್ಥಾಪಿಸಬೇಕು ಎಂಬ ಛಲ ತೊಟ್ಟು ಮಾಡಿದ ಅವರ ಕಾರ್ಯವೈಖರಿ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಯುವ ಸಮಿತಿ ಅಧ್ಯಕ್ಷ ಪೂರ್ಣೇಶ್ ಗೌಡ ಬಲ್ಯ, ಮಹಿಳಾ ಸಮಿತಿ ಅಧ್ಯಕ್ಷೆ ವೀಣಾ ಕೊಲ್ಲೆಸಾಗು, ತಾಲೂಕು ಸಮಿತಿ ನಿರ್ದೇಶಕಿ ಆಶಾ ತಿಮ್ಮಪ್ಪ ಗೌಡ, ಕಡಬ ವಲಯ ಸಮಿತಿ ಅಧ್ಯಕ್ಷ ಸೀತಾರಾಮ ಗೌಡ ಕಡಬ, ಪಿ.ಪಿ.ವರ್ಗೀಸ್, ತಹಶೀಲ್ದಾರ್ ಪ್ರಭಾಕರ ಖಜೂರೆ, ತಾಲೂಕು ಪಂಚಾಯತ್ ಇಒ ಚೆನ್ನಪ್ಪ ಗೌಡ, ತಾಲೂಕು ಸಮಿತಿ ಉಪಾಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ, ಒಕ್ಕಲಿಗ ಗೌಡ ಸೇವಾ ಸಂಘದ ಹಿರಿಯರಾದ ಜನಾರ್ದನ ಗೌಡ ಪಣೆಮಜಲು ಉಪಸ್ಥಿತರಿದ್ದರು.
ತಾಲೂಕು ಸಮಿತಿ ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ದಯಾನಂದ ಆಲಡ್ಕ, ಕುಶಾಲಪ್ಪಗೌಡ ಅನಿಲ, ನೀಲಾವತಿ ಶಿವರಾಮ್, ಸರ್ವೋತ್ತಮ ಗೌಡ ಪಂಜೋಡಿ, ವೆಂಕಟ್ರಮಣ ಗೌಡ ಪಾಂಗ, ಬಾಲಕೃಷ್ಣ ಗೌಡ ಕೋಲ್ಪೆ, ಚಂದ್ರಶೇಖರ ಗೌಡ ಕೋಡಿಬೈಲು, ವೆಂಕಟ್ರಾಜ್ ಕೋಡಿಬೈಲು, ರಾಧಾಕೃಷ್ಣ ಕೇರ್ನಡ್ಕ, ತಿಮ್ಮಪ್ಪ ಗೌಡ ಕುಂಡಡ್ಕ, ಪ್ರಶಾಂತ್ ಪಂಜೋಡಿ, ಕಡಬ ಪದವಿಫೂರ್ವ ಕಾಲೇಜಿನ ಪ್ರಾಂಶುಪಾಲ ವಾಸುದೇವ ಗೌಡ ಕೋಲ್ಪೆ, ಮಹಿಳಾ ಸಮಿತಿ ಕಾರ್ಯದರ್ಶಿ ಲಾವಣ್ಯ ಹೇಮಂತ್, ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಅಧಿಕಾರಿ ವರ್ಗದವರು, ಸ್ಥಳೀಯರು ಗೌಡ ಸಮಾಜ ಬಾಂಧವರು, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್. ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಒಕ್ಕಲಿಗ ಸಮುದಾಯ ಬಾಂಧವರಿಗೆ ಗೌರವಾರ್ಪಣೆ ನಡೆಯಿತು. ಕೃಷಿಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.