ಅಮರನಾಥ ಯಾತ್ರಿಕರಿಗೆ ಭಯೋತ್ಪಾದಕ ದಾಳಿ ಬೆದರಿಕೆ | ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆ

ಜಮ್ಮು ಕಾಶ್ಮೀರ: ಜೂ. 29ರಿಂದ ಪ್ರಸಿದ್ಧ ಅಮರನಾಥ ಯಾತ್ರೆ ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆ ಜಮ್ಮು-ಕಾಶ್ಮೀರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಅಮರನಾಥ ಬೇಸ್ ಕ್ಯಾಂಪ್ ಗೂ 3 ಹಂತದ ಭದ್ರತೆ ಒದಗಿಸಲಾಗಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ 260 ಡಿಗ್ರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಯಾತ್ರೆ ಸಾಗುವ ಹೆದ್ದಾರಿಯ ಸುರಕ್ಷತೆ ಖಾತರಿಗಾಗಿ ವಾಹನಗಳನ್ನು ಪರಿಶೀಲಿಸಲು 60 ಕ್ಯಾಮರಾಗಳು, ಬಾಡಿ ಸ್ಕ್ಯಾನರ್ ಗಳನ್ನು ಅಳವಡಿಸಲಾಗಿದೆ. ಜೊತೆಗೆ ರಂಭಾನ್ ಜಿಲ್ಲೆಯ ಉಧಂಪುರದಿಂದ ಬನಿಹಾಲ್ ವರೆಗೆ 260 ಡಿಗ್ರಿಯ 10 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. 24/7 ಕಂಟ್ರೋಲ್ ರೂಂ ರಚನೆ ಮಾಡಲಾಗಿದೆ. ಜಮ್ಮುವಿನ ಭಗವತಿ ನಗರ ಯಾತ್ರಾರ್ಥಿಗಳ ಬೇಸ್ ಕ್ಯಾಂಪ್ ಆಗಿರುತ್ತದೆ. ಹೀಗಾಗಿ ಈ ಸ್ಥಳದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಯಾತ್ರಾರ್ಥಿಗಳ ಸುರಕ್ಷತೆಗಾಗಿ ಕೂಡಲೇ ಪ್ರತಿಕ್ರಿಯೆ ತಂಡಗಳನ್ನೂ ರಚಿಸಲಾಗಿದೆ ಎಂದು ಎಸ್.ಎಸ್.ಪಿ ಮಾಹಿತಿ ನೀಡಿದ್ದಾರೆ.

ಪವಿತ್ರ ಅಮರನಾಥ ಯಾತ್ರೆಗೆ ಭಯೋತ್ಪಾದಕಾ ದಾಳಿಯ ಕಂಟಕ ಎದುರಾಗಿದೆ. ಈ ಬಾರಿ ಯಾತ್ರೆಯನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯ ಎಸಗಲು ಪಾಕಿಸ್ತಾನ ಭಾರೀ ಸಂಚು ರೂಪಿಸಿರುವುದು ಬಯಲಾಗಿದೆ. ಲಷ್ಕರ್ ಉಗ್ರ ಸಂಘಟನೆ ಮುಖ್ಯಸ್ಥ ಅಬ್ದುಲ್ ರೆಹಮಾನ್ ಮಕ್ಕಿ ಲಾಹೋರ್ ಮತ್ತು ಬಹವಾಲ್ ಪುರದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹಂಚುವ ಬಗ್ಗೆ ಮಹತ್ವ ಸಭೆ ನಡೆಸಿದ್ದಾನೆ. ಅಮರನಾಥ್ ಯಾತ್ರೆ ಸಂದರ್ಭದಲ್ಲಿ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಅಮೆರಿಕ ನಿರ್ಮಿತ ಶಸ್ತ್ರಾಸ್ತಗಳನ್ನು ಪೂರೈಕೆ ಮಾಡುವುದೇ ಈ ಸಭೆಯ ಪ್ರಮುಖ ಉದ್ದೇಶವಾಗಿತ್ತು.





























 
 

ಉಗ್ರ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಗುಪ್ತಚರರ ನೇಮಿಸಲಾಗುವುದು. ನೈಸರ್ಗಿಕ, ಮಾನವ ನಿರ್ಮಿತ ವಿಪತ್ತುಗಳ ನಿರ್ವಹಣೆಗೆ ಯೋಜಿಸಲಾಗಿದೆ. ಗಡಿ ಪ್ರದೇಶಗಳಲ್ಲೂ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಗಸ್ತು, ಮೇಲ್ವಿಚಾರಣೆ ಹೆಚ್ಚಳ ಮಾಡಿ ವ್ಯವಸ್ಥೆ ಕಲ್ಪಿಸಲಾಗಿದೆ.

ಹಿಮಾಲಯದ ಅಮರನಾಥ ಯಾತ್ರೆ ಬಹಳ ಹಳೆಯದು ಮತ್ತು ಪವಿತ್ರವಾದದ್ದು. ಇಲ್ಲಿ ಸುಮಾರು 5000 ವರ್ಷಗಳಷ್ಟು ಹಳೆಯದಾದ ಶಿವಲಿಂಗವಿದ್ದು ಈ ಪರ್ವತ ಶಿಖರದ ಸಮೀಪದಲ್ಲಿರುವ ಅಮರನಾಥ ಗುಹೆಯು ಹಿಂದೂ ಧರ್ಮದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಮರನಾಥ ಯಾತ್ರೆ ಕೈಗೊಳ್ಳುತ್ತಾರೆ. ಇದನ್ನು ತೀರ್ಥಯಾತ್ರೆ ಎಂದು ಪರಿಗಣಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top