ಕೇರಳ : ರಾಜ್ಯದ ಹೆಸರನ್ನು “ಕೇರಳಂ” ಬದಲಾಯಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ನಿರ್ಣಯ ವನ್ನು ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಿದೆ.
ಒಂದು ವರ್ಷದ ಹಿಂದೆ ನಿರ್ಣಯ ಆಂಗೀಕರಿಸಲಾಗಿತ್ತು,ಈ ಬಾರಿ ನಿರ್ಣಯದಲ್ಲಿ ಅಲ್ಪ ಮಾರ್ಪಾಡು ಮಾಡಲಾಗಿದೆ.
ಈ ಹಿಂದೆ ಕೇಂದ್ರ ಸರ್ಕಾರ ಕೆಲವು ತಿದ್ದುಪಡಿ ಉಲ್ಲೇಖಿಸಿ ವಾಪಸ್ ಕಳುಹಿಸಿತ್ತು.ಮುಖ್ಯಮಂತ್ರಿ ಪಿನರಾಯಿ ವಿಜಯನ್ ಮಂಡಿಸಿದ ನಿರ್ಣಯ ಸಂವಿಧಾನ ವಿಧಿ 3 ಅನ್ವಯ ಕೆಲವೊಂದು ತಿದ್ದುಪಡಿಗಳನ್ನು ತಂದು ರಾಜ್ಯದ ಹೆಸರನ್ನು ಸಂವಿಧಾನ ಮೊದಲ ಷೆಡ್ಯೂಲ್ ಪ್ರಕಾರ ಕೇರಳಂ ಅಧಿಕೃತವಾಗಿ ಬದಲಾಯಿಸಲು ಮನವಿ ಮಾಡಿದೆ.