ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಪ್ರಥಮ ಮತ್ತು ದ್ವಿತೀಯ ಬಿಬಿಎ ವಿದ್ಯಾರ್ಥಿಗಳು ಇತ್ತೀಚೆಗೆ ಮಂಗಳೂರಿನ ಕೊಣಾಜೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡೆಕ್ಕನ್ ಪ್ಲಾಸ್ಟ್ ಕೈಗಾರಿಕೆಗೆ ಭೇಟಿ ನೀಡಿದರು.
ಕೈಗಾರಿಕೆ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಕೈಗಾರಿಕೆ ಬಗ್ಗೆ ಮಾಹಿತಿ ನೀಡಿದರು. ವಿವಿಧ ಬಗೆಯ ಚೇರ್ಸ್, ಟೇಬಲ್ಸ್ ಬೇಬಿ ಚೇರ್, ಟಬ್ಸ್, ಕಂಟೈನರ್ ಗಳ ತಯಾರಿಕೆಗಳ ಬಗ್ಗೆ ಮಾಹಿತಿ ನೀಡಿ ವಸ್ತುಗಳು ಹೇಗೆ ತಯಾರಾಗುತ್ತದೆ ಎಂದು ತೋರಿಸಿಕೊಟ್ಟರು. ಸುಮಾರು 8 ಕೂ ಹೆಚ್ಚು ಮಶೀನ್ ಗಳ ಕಾರ್ಯ ವೈಖರಿ ಬಗ್ಗೆ ತಿಳಿಸಿಕೊಟ್ಟರು. ಇದರ ಜೊತೆ ಪ್ಲಾಸ್ಟಿಕ್ ವೇಸ್ಟ್ ಹೇಗೆ ಮರುಬಳಕೆಗೆ ಬಳಸಲಾಗುತ್ತದೆ ಎಂದು ಕೂಡ ತಿಳಿಸಿಕೊಟ್ಟರು.
ವ್ಯವಹಾರ ಆಡಳಿತ ವಿಭಾಗವು ವರ್ಷದಲ್ಲಿ 2 ಸಲ ತಮ್ಮ ಎಲ್ಲ ವಿಭಾಗದ ವಿದ್ಯಾರ್ಥಿಗಳ ಕೌಶಲ್ಯ ಅಬಿವೃದ್ದಿಗಾಗಿ ಪುತ್ತೂರು ಮತ್ತು ಮಂಗಳೂರು ಆಸುಪಾಸಿನ ಕೈಗಾರಿಕೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕೈಗಾರಿಕೆ ನಡೆಸುವ ಮತ್ತು ಶುರು ಮಾಡುವ ಬಗ್ಗೆ ಉತ್ತೇಜನ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ಕಾರ್ಯ ವೈಖರಿ ಬಗ್ಗೆ ತಿಳಿಯುತ್ತದೆ ಎಂದು ವಿಭಾಗ ಮುಖ್ಯಸ್ಥರಾದ ಡಾ. ರಾಧಕೃಷ್ಣ ಗೌಡ ತಿಳಿಸಿದ್ದಾರೆ.