ಕುಂಬ್ರ: ಪ್ರಿವೆಂಟಿವ್ ಹೆಲ್ತ್ ಕೇರ್ ವೆಲ್ ನೆಸ್ ಮತ್ತು ತರಬೇತಿ ಕೇಂದ್ರ “ಕಾಯಕಲ್ಪ ಆರೋಗ್ಯ ಧಾಮ” ಪುತ್ತೂರು ತಾಲೂಕಿನ ಕುಂಬ್ರ ವೃತ್ತದ ಬಳಿ ಬೆಳ್ಳಾರೆಯ ರಸ್ತೆಯಲ್ಲಿರುವ ಅರ್ಚನಾ ಆರ್ಕೇಡ್ ನಲ್ಲಿ ಶುಭಾರಂಭಗೊಂಡಿತು.
ಕೆದಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.
ಸಂಸ್ಥೆಯಲ್ಲಿ ಬೆನ್ನುನೋವು, ಕತ್ತು ನೋವು, ಮೈಕೈನೋವು, ಮಂಡಿನೋವು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ, ನರಗಳ ದೌರ್ಬಲ್ಯ, ಕಣ್ಣಿನ ತೊಂದರೆ, ಕಿವಿ, ಮೂಗು, ಗಂಟಲುನೋವು, ಹೃದಯ ಬೊಜ್ಜು, ಮೂತ್ರಕೋಶ ತೊಂದರೆ, ಮೂಲವ್ಯಾದಿ, ಮಹಿಳೆಯರ ಆರೋಗ್ಯ ಇನ್ನಿತರ ಹಲವು ರೀತಿಯ ನೋವುಗಳನ್ನು ಗುಣಪಡಿಸಲಾಗುತ್ತದೆ.
ಬಿಪಿ, ಶುಗರ್, ಸ್ಟ್ರೋಕ್, ಕೊಲೆಸ್ಟ್ರಾಲ್, ಮಹಿಳೆಯರ ಆರೋಗ್ಯ ಮುಂತಾದ ದೇಹದ ಎಲ್ಲಾ ತರಹದ ತೊಂದರೆಗಳಿಂದ ಹೊರಬರಲು, ತಲೆನೋವು, ಪಾದನೋವು, ಮಲಬದ್ಧತೆ, ಹೊಟ್ಟೆ ಉಬ್ಬರಕ್ಕೆ, ನಿದ್ರಾಹೀನತೆ, ದೇಹದ ತೂಕ, ಬೊಜ್ಜು ಕರಗಿಸಲು, ಕೆಮ್ಮು, ಉಸಿರಾಟದ ತೊಂದರೆ ನಿವಾರಿಸಲು ಸಂಸ್ಥೆ ಸಹಾಯ ಮಾಡುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸ್ಪೆಷಲಿಸ್ಟ್ ಲಕ್ಷ್ಮಣ 9901622365 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.