ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವಿಭಾಗಗಳ ವತಿಯಿಂದ ತೃತೀಯ ಬಿ ಎಸ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ‘ಲಮ್ಹೆ’ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ಶನಿವಾರ ನಡೆಯಿತು.
ಕಾಲೇಜಿನ ವಿಜ್ಞಾನ ವಿಭಾಗದ ಡೀನ್, ಐಕ್ಯೂಎಸಿ ಸಂಯೋಜಕಿ ಡಾ.ಮಾಲಿನಿ ಕೆ. ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಕಾಲೇಜಿನ ಅಂತಿಮ ಬಿಎಸ್ಸಿ ವಿದ್ಯಾರ್ಥಿಗಳಾದ ನಾದ ಐ.ಎ. ಶ್ರಾವ್ಯ ಆರ್.ಎಸ್. ಅನುಭವಗಳನ್ನು ಹಂಚಿಕೊಂಡರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಮಲಿಹಾ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು.
ಪ್ರಿನ್ಸಿಪಾಲ್ ರೆ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದ ಸವಾಲುಗಳನ್ನು ಜಯಿಸುವಲ್ಲಿ ದೃಢತೆಯ ಮಹತ್ವವನ್ನು ಒತ್ತಿ ಹೇಳಿದರು. ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು ಮತ್ತು ಸಂಸ್ಥೆಯ ಖ್ಯಾತಿಯನ್ನು ಎತ್ತಿ ಹಿಡಿಯಲು ಪ್ರೋತ್ಸಾಹಿಸಿದರು. ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಿನ್ಸಿಪಾಲ್ ಡಾ ವಿಜಯ್ ಕುಮಾರ್ ಮೊಳೆಯಾರ್, ತೃತೀಯ ಬಿಎಸ್ಸಿ ತರಗತಿಯ ಶೈಕ್ಷಣಿಕ ಸಲಹೆಗಾರ ಡಾ ಚಂದ್ರಶೇಖರ ಕೆ. ಉಪಸ್ಥಿತರಿದ್ದರು.
ಆಶ್ರಿತಾ ಮತ್ತು ತಂಡದವರು ಪ್ರಾರ್ಥನೆ ಹಾಡಿದರು. ಆಯಿಷಾ ಶಾಮ ಸ್ವಾಗತಿಸಿ, ಫಾತಿಮಾ ಸಫಾ ವಂದಿಸಿದರು. ಫಾತಿಮಾ ಅಫ್ರಾ ನಿರೂಪಿಸಿದರು. ಬಳಿಕ ಬಿಎಸ್ಸಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದರು.