ಪುತ್ತೂರು: ತಾಲೂಕು ಅಕ್ರಮ-ಸಕ್ರಮ ಮಂಜೂರಾತಿ ಸಭೆ ಮಾನ್ಯ ಶಾಸಕರಾದ ಸಂಜೀವ ಮಠದೂರು ನೇತೃತ್ವದಲ್ಲಿ ನಡೆಯಿತು.ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗೆ ಮುಟ್ಟಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಬ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗ ನಿಟ್ಟಿನಲ್ಲಿ ರೈತರಿಗೆ ಇಲಾಖೆಯ ಅಧಿಕಾರಿಗಳಿಂದ ಆಗುವ ಸಮಸ್ಯೆಗಳ ಬಗ್ಗೆ ತಿಳಿಸಬೇಕು. ಸರ್ಕಾರಿ ಜಾಗದಲ್ಲಿ ಸಾಗುವಳಿ ಮಾಡಿದ ರೈತರಿಗೆ ಸಕ್ರಮ ಮಾಡಲು ಅವಕಾಶ ಮಾಡಿಕೊಡಲಾಗಿದ್ದು, ಮಾ.30ರ ತನಕ ಅಕ್ರಮ ಸಕ್ರಮ ಅರ್ಜಿ ನೀಡಲು ಅವಕಾಶವಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು. ಅವರು ಪುತ್ತೂರು ಪುರಭವನದಲ್ಲಿ ಅಕ್ರಮ ಸಕ್ರಮ ಮಂಜೂರಾತಿ ಸಭೆಯಲ್ಲಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.
ಮಂಜೂರಾತಿಯ ಹಕ್ಕುಪತ್ರ ಹಾಗೂ ನಕ್ಷೆಯನ್ನು ನೀಡುವ ಸಮಯ ಪರಿಶೀಲನೆ ಮಾಡಿಕೊಳ್ಳುವ ಅಗತ್ಯವಿದೆ. ನಗರ ಸಭೆಯ ಬಫರ್ ಝೋನ್ ಜಾಗ ಮಂಜೂರಾತಿಯ ಕಾನೂನಿನ ತೊಡಕುಗಳನ್ನು ಸಡಿಲಿಕೆ ಮಾಡಿಕೊಡಬೇಕು. ಸಿಟ್ಟಿಂಗ್ ಅಲ್ಲಿ ಮಂಜೂರಾತಿ ಆದ ಜಾಗವನ್ನು ಫಲಾನುಭವಿಗಳಿಗೆ ನೀಡುವ ಕಾರ್ಯಮಾಡಬೇಕು. ಇಲ್ಲದೇ ಹೋದಲ್ಲಿ ಮುಖ್ಯ ಕಾರ್ಯದರ್ಶಿಯವರಿಗೆ ಸಮಗ್ರ ಮಾಹಿತಿ ನೀಡಬೇಕಾಗುತ್ತದೆ ಎಂದರು.
61 ಮಂದಿ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕು ಪತ್ರ ವಿತರಣೆ, 22ಮಂದಿಗೆ ಅಕ್ರಮ ಸಕ್ರಮ ಸಾಗುವಳಿ ಚೀಟಿಯನ್ನು ವಿತರಣೆ ಮಾಡಲಾಯಿತು.ಪುತ್ತೂರು ತಹಸೀಲ್ದಾರ ನಿಸರ್ಗಪ್ರಿಯ, ಬಗರ್ ಹುಕುಂ ಸಮಿತಿಯ ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ,ಪರಮೇಶ್ವರಿ ಭಟ್, ಅಕ್ಷಯಾ ಹಾಗೂ ಪುತ್ತೂರು ತಾಲೂಕು ಆಡಳಿತದ ಅಧಿಕಾರಿಗಳು ಹಾಜರಿದ್ದರು.