ಭಾರತದಲ್ಲಿ ಒಂದು ಸಮುದಾಯದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಹೋರಾಟ ಮಾಡುತ್ತಿದ್ದಾರೆ ಆದರೆ ಪೂರ್ಣ ಮುಸ್ಲಿಂ ರಾಷ್ಟ್ರವಾಗಿರುವ ತಜಕಿಸ್ಥಾನ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ನಿಷೇಧಿಸಲು ಆದೇಶ ಹೊರಡಿಸಿದೆ.
ತಜಕಿಸ್ಥಾನ ಮುಸ್ಲಿಂ ರಾಷ್ಟ್ರವಾಗಿದ್ದರೂ ಸಾಂವಿಧಾನಿಕವಾಗಿ ಜಾತ್ಯಾತೀತ ರಾಷ್ಟ್ರವಾಗಿದೆ. ಇಲ್ಲಿನ ಸಂಸತ್ ಹಿಜಾಬ್ ಅನ್ನು ನಿಷೇಧಿಸುವ ಮಸೂದೆಯನ್ನು ಅನುಮೋದಿಸಿದೆ. ಶಾಲೆಗಳಲ್ಲಿ ಮಾತ್ರವಲ್ಲ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ. ಗಡ್ಡ ಬೆಳೆಸುವುದನ್ನೂ ಕೂಡ ತಜಿಕಿಸ್ಥಾನದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ದೇಶದಲ್ಲಿ ಶೇ. 95ರಷ್ಟು ಮುಸ್ಲಿಂ ಜನರಿದ್ದಾರೆ, ಆದರೆ ಇಲ್ಲಿ ನಿಯಮಗಳೆಲ್ಲವೂ ಕಟ್ಟುನಿಟ್ಟಾಗಿವೆ. ಇಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರು ಹಿಜಾಬ್ ಧರಿಸುವುದನ್ನು ತಡೆಯುವ ನಿಯಮಗಳಿವೆ. 18 ವರ್ಷದೊಳಗಿನ ಮಕ್ಕಳು ಅಂತ್ಯಕ್ರಿಯೆ ಹೊರತುಪಡಿಸಿ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಇಲ್ಲಿನ ಕಾನೂನು, ಮದುವೆಯಂತಹ ಕಾರ್ಯಕ್ರಮಗಳನ್ನೂ ನಿಯಂತ್ರಿಸುತ್ತದೆ. ಇಲ್ಲಿ ಯಾರೂ ಮದುವೆ ಮಾಡಬಾರದು ಅಂತಲ್ಲ, ಆದರೆ ಸರಕಾರದಿಂದ ಅನುಮತಿ ಪಡೆದ ನಂತರವೇ ಎಲ್ಲಾ ಕೆಲಸಗಳು ನಡೆಯುತ್ತವೆ.