ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆಯ ದಶಮಾನೋತ್ಸವ ಕಾರ್ಯಕ್ರಮ ಇಂದು ಬೆಳಿಗ್ಗೆ ಶಾಖೆಯಲ್ಲಿ ನಡೆಯಿತು.
ದಶಮಾನೋತ್ಸವದ ಅಂಗವಾಗಿ ಗಣಹೋಮ, ಶ್ರೀ ಲಕ್ಷ್ಮೀಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, 2002 ರಲ್ಲಿ ಡಿ.ವಿ.ಸದಾನಂದ ಗೌಡರು ಶಾಸಕರಾಗಿದ್ದಾಗ ಸಮಾನ ಮನಸ್ಕರ ಕಲ್ಪನೆಯಂತೆ ಪುತ್ತೂರಿನಲ್ಲಿ ಪ್ರಥಮ ಶಾಖೆಯನ್ನು 2002 ರಲ್ಲಿ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಮೋಹನ ಗೌಡ ನೇತೃತ್ವ ವಹಿಸಿದ್ದರು. ತನ್ನದೇ ಆದ ಕಾರ್ಯಶೈಲಿಯಲ್ಲಿ ಚಟುವಟಿಕೆಗಳನ್ನು ಮಾಡುತ್ತಾ 2009 ರಲ್ಲಿ ಕಡಬ, 2011 ರಲ್ಲಿ ಉಪ್ಪಿನಂಗಡಿ, 2014 ರಲ್ಲಿ ನೆಲ್ಯಾಡಿ ಹಾಗೂ 2015 ರಲ್ಲಿ ಕುಂಬ್ರ ಶಾಖೆಯನ್ನು ಆರಂಭಿಸಲಾಯಿತು. ಪ್ರಾರಂಭ ಹಂತದಲ್ಲಿ ಜಗನ್ನಾಥ ಬೊಮ್ಮೆಟ್ಟಿ ಇದ್ದರೂ ಇದೀಗ ಅವರು ನಮ್ಮೊಂದಿಗಿಲ್ಲ. ಆನಂತರದ ದಿನಗಳಲ್ಲಿ ಜವಾಬ್ದಾರಿ ನನಗೆ ಬರುವ ಅವಕಾಶ ಸಿಕ್ಕಿತ್ತು. ಬಳಿಕ ದಿನಗಳಲ್ಲಿ 2019 ರಿಂದ ಪ್ರತೀ ವರ್ಷ ನಿರಂತರ ಶಾಖೆ ತೆರಯುವಂತಾಯಿತು. ಈ ಮೂಲಕ ಪ್ರತಿ ವರ್ಷ ಒಂದೊಂದು ಶಾಖೆ ಎಲ್ಲರ ಸಹಕಾರದೊಂದಿಗೆ ತೆರಲಾಗಿದೆ. ಒಂದು ರೀತಿಯಲ್ಲಿ ಖಾಸಗಿ, ಜಾತಿಯ ಹಿನ್ನಲೆಯಲ್ಲಿ ಬಂದ ಸಹಕಾರಿ ಸಂಘ ಇಂದು ಎಲ್ಲಾ ಧರ್ಮದವರಿಗೆ ಸಹಕಾರ ನೀಡುತ್ತಾ ಅತ್ಯುನ್ನತ ಸಹಕಾರಿ ಸಂಘದ ಆಗಿ ಬೆಳೆದು ಬಂದಿದೆ ಎಂದ ಅವರು, ಕುಂಬ್ರ ಶಾಖೆ 99.27 ಸಾಲ ವಸೂಲಾತಿ ಮಾಡಿದ್ದು, ಶಾಖೆಯ ಸಲಹಾ ಸಮಿತಿಯವರು, ನಿರ್ದೇಶಕರ ಸಹಕಾರದೊಂದಿಗೆ ಉನ್ನತ ಮಟ್ಟಕ್ಕೆ ಹೋಗುತ್ತಿದೆ. ಎಲ್ಲಾ ಶಾಖೆ ತನ್ನದೇ ಆದ ನೀತಿಯಲ್ಲಿ ನೀಡಿದ ಟಾರ್ಗೆಟ್ ರೀಚ್ ಮಾಡಿದೆ. ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಂಬ್ರ ಶಾಖಾ ಅಧ್ಯಕ್ಷ ಲೋಕೇಶ್ ಸಿ.ಎಚ್., ಉಪಾಧ್ಯಕ್ಷ ಸತೀಶ್ ಪಾಂಬಾರು, ಗೌರವ ಸಲಹೆಗಾರರಾದ ಶಿವರಾಮ ಗೌಡ, ಶ್ರೀಧರ ಗೌಡ ಕಣಜಾಲು, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ, ಸಂಘದ ಸದಸ್ಯರಾದ ನಾಗಪ್ಪ ಗೌಡ ಬಿ., ಶ್ರೀಧರ ಗೌಡ, ವಿಶ್ವನಾಥ ಬಿ., ವಿಜಯ ಭಾರತಿ, ನಿರ್ದೇಶಕರಾದ ಪ್ರವೀಣ್ ಕುಂಟ್ಯಾಣ, ತೇಜಸ್ವಿನಿ ಕಟ್ಟಪುಣಿ, ಮಾಜಿ ನಿರ್ದೇಶಕಿ ರೇಖಾ ಆರ್.ಗೌಡ, ಸದಸ್ಯರಾದ ಶ್ರೀಧರ ಗೌಡ ಅರೆಕ್ಕಳ, ತಿರುಮಲೇಶ್ವರ ಗೌಡ, ಯುವಕ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಅಮರನಾಥ ಗೌಡ, ಕಾರ್ಯದರ್ಶಿ ಆನಂದ ತೆಂಕಿಲ, ನಿರ್ದೇಶಕ ಜಿನ್ನಪ್ಪ ಗೌಡ, ಸದಸ್ಯ ರಾಮಣ್ಣ ಗೌಡ ಉಪಸ್ಥಿತರಿದ್ದರು.
ಸಂಘದ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ. ಕಾರ್ಯಕ್ರಮ ನಿರೂಪಿಸಿದರು. ಕಚೇರಿಯ ಶಾಖಾ ಮ್ಯಾನೇಜರ್, ಸಿಬ್ಬಂದಿಗಳು ಉಪಸ್ಥಿತರಿದ್ದರು.