ಪುತ್ತೂರು : ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಕಲಿಕಾ ಹಬ್ಬ ಹಾಗೂ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಬುಧವಾರ ನಡೆಯಿತು.
ಶಾಸಕ ಸಂಜೀವ ಮಠಂದೂರು ಸ್ಟಾರ್ಟ್ ಕ್ಲಾಸ್ ಉದ್ಘಾಟಿಸಿ, ಮಕ್ಕಳು ಪ್ರಕೃತಿಯೊಂದಿಗೆ ಬೆರೆತು ಪ್ರಕೃತಿಯ ವಿಚಾರ ತಿಳಿದು ಕೊಳ್ಳಲು ಕಲಿಕಾ ಹಬ್ಬ ಪೂಕರವಾಗಿದ್ದು, ಪ್ರಕೃತಿ ಮಡಿಲಲ್ಲಿ ಶಿಕ್ಷಕರ ಜೊತೆಗೂಡಿ ವಿದ್ಯಾರ್ಥಿಗಳಿಗೆ ಕಲಿಕೆ ಹಬ್ಬವಾಗಿ ಪರಿಣಮಿಸಿದೆ. ಇಂತಹಾ ಕಾರ್ಯಕ್ರಮ ಮಕ್ಕಳಲ್ಲಿ ಉತ್ಸಾಹ ಮೂಡಿಸುವ ಜತೆಗೆ ಶೈಕ್ಷಣಿಕವಾಗಿ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ ಎಂದರು.
ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜಾ ರಾಧಕೃಷ್ಣ ಆಳ್ವ ಮಾತನಾಡಿ, ಮಕ್ಕಳು ಕಲಿಕಾ ಹಬ್ಬದ ಮೂಲಕ ಹಲವಾರು ವಿಷಯಗಳನ್ನು ಕಲಿಯುತ್ತಾರೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ನೀನಾ ಕುವೆಲ್ಲೋ, ಕಾರ್ಯಾಧ್ಯಕ್ಷ ನಿತೇಶ್ ಕುಮಾರ್ ಶಾಂತಿವನ, ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತಾರು, ಉಪಾಧ್ಯಕ್ಷರು ಪೋಷಕರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.