ಪುತ್ತೂರು: ಸಂತ ಫಿಲೋಮಿನಾ ಕಾಲೇಜಿಗೆ 2023-25ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ 5 ರ್ಯಾಂಕ್ ಗಳು ಲಭಿಸಿದೆ.
ಬಿ.ಕಾಂ ಪದವಿ ವಿಭಾಗದಲ್ಲಿ ರಿತೇಶ್ ರೈ ಎಂ. 96.21% ಅಂಕಗಳೊಂದಿಗೆ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಇವರು ಸರ್ವೆ ಮೇಗಿನಗುತ್ತು ನಿವಾಸಿ ಸೀತಾರಾಮ ರೈ ಹಾಗೂ ಸರಸ್ವತಿ ದಂಪತಿ ಪುತ್ರ.
ಬಿ.ಎಸ್.ಸಿ. ವಿಭಾಗದಲ್ಲಿ ಸುಧನ್ವ ಶ್ಯಾಮ್ ಶೇಕಡ 97.6% ಅಂಕಗಳೊಂದಿಗೆ ದ್ವಿತೀಯ ರ್ಯಾಂಕ್ ಗಳಿಸಿದ್ದು, ಬಲ್ನಾಡಿನ ಸುಬ್ರಹ್ಮಣ್ಯ ಕುಮಾರ್ ಹಾಗೂ ಸುಶೀಲಾ ದೇವಿ ದಂಪತಿ ಪುತ್ರ. ಬಿ.ಸಿ.ಎ. ಪದವಿ ವಿಭಾಗದಲ್ಲಿ ಅರ್ಪಿತಾ ಕೆ 95.75% ಅಂಕ ಗಳಿಸಿ ತೃತೀಯ ರ್ಯಾಂಕ್ ಗಳಿಸಿದ್ದು, ಕೆಮ್ಮಿಂಜೆ ಪ್ರಸಾದ್ ಹೆಬ್ಬಾರ್ ಹಾಗೂ ಮಹಾಲಕ್ಷ್ಮಿ ದಂಪತಿ ಪುತ್ರಿ.
ಕಾಲೇಜಿನ ಕಲಾ ವಿಭಾಗಕ್ಕೆ 2 ರ್ಯಾಂಕ್ ಗಳು ಲಭಿಸಿದ್ದು, ವಿನ್ಯಾ ರೈ 89.98% ಅಂಕ ಗಳಿಸಿ 4 ನೇ ರ್ಯಾಂಕ್ ಪಡೆದಿದ್ದಾರೆ. ಕೈಕಾರದ ಅಂಭಾಗಿಲು ನಿವಾಸಿ ಸಂಜೀವ ರೈ ಹಾಗೂ ವೀಣಾ ಎಸ್. ರೈ ದಂಪತಿ ಪುತ್ರಿ. ಹರ್ಷಿಣಿ ಸಿಂಗ್ ಪಿ. 88.74 ಶೇ. ಅಂಕ ಪಡೆದು 8ನೇ ರ್ಯಾಂಕ್ ಪಡೆದಿದ್ದಾರೆ. ಮಡಿಕೇರಿಯ ಪ್ರದೀಪ್ ಕುಮಾರ್ ಸಿಂಗ್ ಹಾಗೂ ಮಹಾಲಕ್ಷ್ಮಿ ದಂಪತಿ ಪುತ್ರಿ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಸಂಚಾಲಕ ಅ. ವಂ. ಲಾರೆನ್ಸ್ ಮಸ್ಕರೇನಸ್ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ, ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಆಡಳಿತ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿರುತ್ತಾರೆ.