ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಸುಳ್ಯ ನಗರ ಪಂಚಾಯಿತಿ ಸಹಕಾರದೊಂದಿಗೆ ಸುಳ್ಯ ಪೈಚಾರಿನಲ್ಲಿ ಸುಮತಿ ಎಂಬವರಿಗೆ ನೂತನವಾಗಿ ನಿರ್ಮಿಸಿದ ಮನೆ ಸೇವಾಶ್ರಯದ ಹಸ್ತಾಂತರ ಕಾರ್ಯಕ್ರಮ ಮೇ.26ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಹಲವು ವರ್ಷಗಳಿಂದ ವಾಸಯೋಗ್ಯವಾದ ಮನೆಯಿರದೆ ಪ್ಲಾಸ್ಟಿಕ್ ಜೋಪಡಿಯಲ್ಲಿದ್ದ ಕುಟುಂಬಕ್ಕೆ ಮನೆ ನಿರ್ಮಿಸಿಕೊಂಡುವಂತೆ ಮಹಿಳೆಯೋರ್ವರು ಫೋನ್ ಮಾಡಿ ಅರುಣ್ ಕುಮಾರ್ ಪುತ್ತಿಲರಿಗೆ 2023ರಲ್ಲಿ ತಿಳಿಸಿದರು. ಆ ಕುಟುಂಬಕ್ಕೆ ಸರಕಾರದ ಯಾವೂದೇ ಸೌಲಭ್ಯ ಪಡೆಯಲು ಕೆಲವೊಂದು ತೊಡಕುಗಳಿದ್ದವು. ನಗರ ಪಂಚಾಯಿತಿ ಅಧಿಕಾರಿಗಳ ಸಹಕಾರದೊಂದಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸೇವಾಶ್ರಯ ಯೋಜನೆಯಡಿ ದಾನಿಗಳ ಸಹಾಯ ಪಡೆದು ಇದೀಗ ಮನೆ ನಿರ್ಮಾಣವಾಗಿದೆ.
ನಾಳೆ ನಡೆಯುವ ಸೇವಾಶ್ರಯ ಹಸ್ತಾಂತರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಅರುಣ್ ಕುಮಾರ್ ಪುತ್ತಿಲ ವಹಿಸಲಿದ್ದಾರೆ. ಮನೆಯ ಕೀ ಹಸ್ತಾಂತರವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್ .ಎನ್ ಮನ್ಮಥ ನೆರವೇರಿಸಲಿದ್ದಾರೆ. ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎ ರಾಮಚಂದ್ರ, ಕೆವಿಜಿ ವಿದ್ಯಾಸಂಸ್ಥೆಯ ಅಕ್ಷಯ್ ಕೆಸಿ, ಜಿಲ್ಲಾ ಪಂಚಾಯಿತಿ ಸದಸ್ಯ ಹರೀಶ್ ಕಂಜಿಪಿಲಿ, ಹರೀಶ್ ಬಂಟ್ವಾಳ, ದೇವಚಳ್ಳ ಗ್ರಾ.ಪಂ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸುಳ್ಯ ಎಪಿಎಂಸಿ ಮಾಜಿ ಉಪಾಧ್ಯಕ್ಷ ಸಂತೋಷ್ ಜಾಕೆ, ಅರಂತೋಡು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.