ಅನಾರೋಗ್ಯಕ್ಕೆ ತುತ್ತಾದ ಧನ್ವಿತ್ | ಚಿಕಿತ್ಸೆಗೆ ಸಹೃದಯಿಗಳಿಂದ ಬೇಕಾಗಿದೆ ಧನಸಹಾಯ

ಭವಿಷ್ಯದ ಸುಂದರ ಬದುಕಿನ ಕನಸಿನೊಂದಿಗೆ ಹೆಜ್ಜೆ ಹಾಕಬೇಕಾಗಿದ್ದ ಬಾಲಕ ಮಾ.ಧನ್ವಿತ್ ಇದೀಗ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಚಿಕಿತ್ಸೆಗೆ ಸಹೃದಯಿಗಳಿಂದ ಧನ ಸಹಾಯ ಬೇಕಾಗಿದೆ.

ಕಡಬ ತಾಲೂಕಿನ ಸವಣೂರು ಗ್ರಾಮದ ಕೇಕುಡೆ ನಿವಾಸಿಗಳು, ಶ್ರಮ ಭರಿತ ದುಡಿಮೆಯ ಆದಾಯದಿಂದ ಕಷ್ಟದ ಬದುಕು ಸಾಗಿಸುತ್ತಿರುವ ಮೋನಪ್ಪ  ಪೂಜಾರಿ ಹಾಗೂ ವನಿತಾ ದಂಪತಿ ಕಿರಿಯ ಪುತ್ರ 13 ವರ್ಷದ ಧನ್ವಿತ್ ಎಲ್ಲಾ ಮಕ್ಕಳಂತೆ ಆಟದಲ್ಲೂ ಪಾಠದಲ್ಲೂ ಸದಾ ಚಟುವಟಿಕೆಯಿಂದ್ದಿದ್ದ. ಮೂರು ತಿಂಗಳ ಹಿಂದೆ ತರಗತಿ ಪರೀಕ್ಷೆ ಸಂಧರ್ಭದಲ್ಲಿ ಇದ್ದಕಿದ್ದಂತೆ ವಾಂತಿ ಮಾಡಿ ಅನಾರೋಗ್ಯಕ್ಕೆ ಒಳಗಾಗಿ ಸ್ಥಳೀಯ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಕೆಎಂಸಿ ಆಸ್ಪತ್ರೆ, ಬಳಿಕ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅಲ್ಲಿ ಈತನಿಗೆ ಮೆದುಳು ಸಂಬಂಧಿ ಖಾಯಿಲೆಯ ಜೊತೆಗೆ ಮೆದುಳಿನ ಕ್ಷಯ ಇರುವುದಾಗಿ ವೈದ್ಯರು ತಿಳಿಸಿ ತಲೆಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದುವರೆಗೆ ಸಂಬಂಧಿಕರ ‌ಸಹಾಯ ಮತ್ತು  ಸಾಲ ಮಾಡಿ ಸುಮಾರು 4 ರಿಂದ 5 ಲಕ್ಷ ರೂ. ಆಸ್ಪತ್ರೆ ಬಿಲ್ ಪಾವತಿಸಿ ಮನೆಗೆ ಬಂದ ಧನ್ವಿತ್ ನ ಆರೋಗ್ಯ 10 ದಿವಸದಲ್ಲಿ ಹದಗೆಟ್ಟು ನಡೆಯಲಾಗದ ಸ್ಥಿತಿ ತಲುಪಿದ್ದು, ಪುನಃ ಫಸ್ಟ್ ನ್ಯೂರೋ ಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರು 5 ದಿನ ಚಿಕಿತ್ಸೆ ನೀಡಿದ್ದು, ಮುಂದೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲು ತಿಳಿಸಿದ್ದಾರೆ. ಈಗಾಗಲೇ ಮತ್ತೆ ಆಸ್ಪತ್ರೆ ಬಿಲ್ಲ್ ಇತರ ಖರ್ಚು ಒಂದು ಲಕ್ಷ ದಾಟಿದ್ದು, ಬಡ ಕುಟುಂಬ ಆಸ್ಪತ್ರೆ ಬಿಲ್ ಕಟ್ಟಲು ಪರದಾಟ ನಡೆಸುವಂತಾಗಿದೆ.

ಇನ್ನು ಬೆಂಗಳೂರಿನಲ್ಲಿ ನಡೆಯುವ ಚಿಕಿತ್ಸಾ ವೆಚ್ಚ ಅಂದಾಜು ರೂಪಾಯಿ 12 ಲಕ್ಷಕ್ಕಿಂತಲೂ ಹೆಚ್ಚು ಬೇಕಾಗಬಹುದು. ಮಗನ ಕಾಯಿಲೆಯಿಂದಾಗಿ ತಂದೆ ಕೂಲಿ ಕೆಲಸ, ತಾಯಿ ಬೀಡಿ ಕಟ್ಟುವ ಕಾಯಕವನ್ನು ಮಾಡಲಾಗದೆ ಕುಟುಂಬ ಹತಾಶೆಯಿಂದ ಕಂಗಾಲಾಗಿದೆ.









https://screenapp.io/app/#/shared/8P4BcrrHNx























 
 

ಸದಾ ಲವಲವಿಕೆಯಿಂದ ಇರುತ್ತಿದ್ದ ಧನ್ವಿತ್ ನ ಎಲ್ಲಾ ಕನಸುಗಳಿಗೂ, ವಿದ್ಯಾಭ್ಯಾಸಕ್ಕೂ ತಡೆಯಾಗಿದೆ. ದಿಕ್ಕು ತೋಚದೆ ಹೆತ್ತವರು ಮಗನ ಜೀವ ಉಳಿಸಲು ಸಮಾಜದ ಸಹೃದಯಿ ಬಂಧುಗಳ ಮುಂದೆ ಸಹಾಯವನ್ನು ಯಾಚಿಸುತ್ತಿದ್ದಾರೆ. ಬಾಲಕನ ಆರೋಗ್ಯ ಸುಧಾರಿಸಲು, ಕುಟುಂಬದ ಕಷ್ಟ ನೀವಾರಿಸಲು, ಕೋರಿಕೆಯನ್ನು ಪುರಸ್ಕರಿಸಿ ತಮ್ಮ ಕೈಲಾಗುವ ಸಹಾಯ ಮಾಡಬೇಕಾಗಿ ವಿನಂತಿಸಿದ್ದಾರೆ.

ಬ್ಯಾಂಕ್ ಖಾತೆ ವಿವರ :

ಹೆಸರು : ಧನ್ವಿತ್ ಎಂ ಎಸ್

ಬ್ಯಾಂಕ್ ಖಾತೆ ಸಂಖ್ಯೆ : 02122200065605

IFSC code: CNRB0010212

ಕೆನರಾ ಬ್ಯಾಂಕ್ ಸವಣೂರು ಶಾಖೆ

ಮೊಬೈಲ್ : 8762549205

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top