ಭಾರತದ ಎರಡು ಮಸಾಲೆ ಪದಾರ್ಥಗಳನ್ನು ನಿಷೇಧ ಮಾಡಿದ ನೇಪಾಳ

ವಿದೇಶ: ಭಾರತದ ಎ೦ಡಿಎಚ್ ಹಾಗೂ ಎವರೆಸ್ಟ್ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬ೦ದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು ಈ ಎರಡು ಮಸಾಲೆ ಪದಾರ್ಥಗಳಿಗೆ ನಿಷೇಧ ಹೇರಿದೆ.

ಎವರೆಸ್ಟ್ ಮತ್ತು ಎ೦ಡಿಹೆಚ್ ಬ್ರಾ೦ಡ್ ಮಸಾಲೆಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ನಾವು ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ಸಹ ನಿಷೇಧಿಸಿದ್ದೇವೆ ಎ೦ದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎರಡು ನಿರ್ದಿಷ್ಟ ಬ್ರಾಂಡ್‌ಗಳ ಮಸಾಲೆಗಳಲ್ಲಿ ರಾಸಾಯನಿಕಗಳ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ವರದಿ ಬರುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎ೦ದು ಮಹಾರ್ಜನ್ ಹೇಳಿದರು. ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈಗಾಗಲೇ ಎ೦ಡಿಎಚ್ ಮತ್ತು ಎವರೆಸ್ಟ್‌ನ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಆದೇಶಿಸಿದೆ. ಇದು ಹಾಂಕಾಂಗ್ ಮತ್ತು ಸಿಂಗಾಪುರದ ಆಹಾರ ಸುರಕ್ಷತೆ ನಿಯಂತ್ರಕರಿಂದ ವಿವರಗಳನ್ನು ಕೇಳಿದೆ. ಅಮೆರಿಕ ಹಾಗೂ ಆಸ್ಟ್ರೇಲಿಯಾ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಎರಡು ಕಂಪನಿಗಳ ಮಸಾಲೆ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಕೀಟನಾಶಕ, ಎಥಿಲೀನ್ ಆಕ್ಸೆಡ್ ಇದೆ ಎ೦ದು ಹಾಂಕಾಂಗ್ ಗೆ ಕಳೆದ ತಿಂಗಳು ನಿಷೇಧ ಹೇರಿತ್ತು. ಎವರೆಸ್ಟ್ ಸಾಂಬಾರು ಪದಾರ್ಥಗಳ ಮಿಶ್ರಣವನ್ನು ಸಿಂಗಾಪುರ ವಾಪಸ್ ಪಡೆದಿತ್ತು.



































 
 

ಎಥಿಲೀನ್ ಆಕ್ಸೆಡ್ ಮಾನವರಲ್ಲಿ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಅದನ್ನು ಕ್ರಿಮಿನಾಶಕವಾಗಿ ಬಳಕೆ ಮಾಡುವುದನ್ನು ನ್ಯೂಜಿಲೆಂಡ್ ಹಾಗೂ ಇತರೆ ದೇಶಗಳಲ್ಲಿ ನಿಷೇಧಿಸಲಾಗಿದೆ. ಎ೦ಡಿಎಚ್ ಹಾಗೂ ಎವರೆಸ್ಟ್ ನ್ಯೂಜಿಲೆಂಡ್ ನಲ್ಲಿಯೂ ಇರುವುದರಿಂದ ನಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎ೦ದು ನ್ಯೂಜಿಲೆಂಡ್ ನ ಆಹಾರ ಸುರಕ್ಷತೆ ನಿಯಂತ್ರಕದ ಹಂಗಾಮಿ ಉಪನಿರ್ದೇಶಕ ಜೆನ್ನಿ ಬಿಷಪ್ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top