ಪುತ್ತೂರು: ಪುತ್ತೂರಿನ ಜಿಡೆಕಲ್ಲಿನಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ 5ನೆ ಸೆಮಿಸ್ಟರ್ ನ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು ಕಾಲೇಜಿಗೆ ಬಿ.ಕಾಂ. ಮತ್ತು ಬಿ.ಎ. ವಿಭಾಗಗಳ ಪ್ರಕಟಿತ 26 ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ಆರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ (Distinction ) ಪಡೆಯುವುದರೊಂದಿಗೆ ಉತ್ತಮ ಫಲಿತಾಂಶ ಲಭಿಸಿದೆ.
ಅಂತಿಮ ಬಿ.ಕಾಂ.ನ 5ನೆ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಸಂದೇಶ್ ಮಾರುತಿ ಕದಂ ಇವರು ಫೈನಾನ್ಸಿಯಲ್ ಮ್ಯಾನೇಜ್ಮೆಂಟ್, ಇನ್ಕಮ್ ಟ್ಯಾಕ್ಸ್ ಮತ್ತು ಜಿ. ಎಸ್. ಟಿ. ಈ ಮೂರು ವಿಷಯಗಳಲ್ಲಿ 100ಕ್ಕೆ 100 ಅಂಕಗಳು ಮತ್ತು Employability Skills ವಿಷಯದಲ್ಲಿ 99 ಅಂಕ ಪಡೆದಿದ್ದು ಒಟ್ಟು 96.29 ಶೇಕಡಾ ಅಂಕಗಳನ್ನು ಗಳಿಸಿ ಕಾಲೇಜಿಗೆ ಮೊದಲಿಗರಾಗಿದ್ದಾರೆ. ಇವರು ಪುತ್ತೂರಿನ ಡಯಾಸ್ ಕಾಂಪೌಂಡ್’ನ ಮಾರುತಿ ರಾಜಾರಾಂ ಕದಂ ಮತ್ತು ಸವಿತಾ ಮಾರುತಿ ಕದಂ ಇವರ ಪುತ್ರರಾಗಿದ್ದಾರೆ. ಉಳಿದಂತೆ ಯಜ್ಞಶ್ರೀ 87.71 ಶೇಕಡಾ (ಬಂಟ್ವಾಳದ ಪೆರಾಜೆ ಬಳಿಯ ಮೈಂದಗುರಿ ಮನೆಯ ಶೇಖರ ಮೂಲ್ಯ ಮತ್ತು ಸವಿತಾ ಇವರ ಮಗಳು, ದೀಕ್ಷಾ ಬಿ. 83.43 ಶೇಕಡಾ (ಬಂಟ್ವಾಳದ ಬುಡೋಳಿ ಬಳಿಯ ಬೊಳ್ಳುಕಲ್ಲಿನ ದಾಮೋದರ ಮತ್ತು ಲೀಲಾವತಿ ಇವರ ಮಗಳು), ಮೊಹಮ್ಮದ್ ಸಾದತ್ 79.00 ಶೇಕಡಾ (ಪುತ್ತೂರಿನ ಕೆಮ್ಮಿಂಜೆಯ ಕೂರ್ನಡ್ಕ ಬಳಿಯ ಅಬ್ಬಾಸ್ ಮತ್ತು ಮೈಮೂನ ಅವರ ಮಗ) ಮತ್ತು ಫಝೀಲಾ ಬಾನು 73.43 ಶೇಕಡಾ (ಚಿಕ್ಕಮೂಡ್ನೂರಿನ ಜಿಡೆಕಲ್ಲು ಬಳಿಯ ಮೊಹಮ್ಮದ್ ಆಲಿ ಮತ್ತು ಜಮೀಲಾ ಇವರ ಮಗಳು) ಉತ್ತಮ ಸಾಧನೆ ತೋರಿದ್ದಾರೆ. ಬಿ.ಎ. ವಿಭಾಗದ 5ನೆ ಸೆಮಿಸ್ಟರ್ ನಲ್ಲಿ ನವ್ಯಶ್ರೀ (ಕಡಬ ತಾಲೂಕು ಪುಂಚಪ್ಪಾಡಿಯ ಮೋಹನ ಮತ್ತು ವೇದಾವತಿ ಇವರ ಮಗಳು) 71.86 ಶೇಕಡಾ ಅಂಕಗಳನ್ನು ಗಳಿಸಿಕೊಂಡಿದ್ದಾರೆ.
ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಮತ್ತು ಶ್ರಮ ವಹಿಸಿ ದುಡಿದ ಬೋಧಕ ವರ್ಗದವರನ್ನು ಪ್ರಾಂಶುಪಾಲ ಪ್ರೊ. ಅಪ್ಪು ಅವರು ಅಭಿನಂದಿಸಿದ್ದಾರೆ.