ಪುತ್ತೂರು : ಶ್ರೀಮತಿ ಶರ್ಮಿಳಾ ನಟರಾಜ್ ಅವರು ಡಾll ಆರ್. ಬಾಲಸುಬ್ರಮಣಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಯೂಸ್ ಆಂಡ್ ಇಂಪ್ಯಾಕ್ಟ್ ಆಫ್ ಆಕ್ಸೆಸ್ ಟು ಎನ್-ಲಿಸ್ಟ್ ಇ-ರಿಸೋರ್ಸಸ್ ಬೈ ದಿ ಫ್ಯಾಕಲ್ಟಿ ಮೆಂಬರ್ಸ್ ಆಂಡ್ ರಿಸರ್ಚ್ ಸ್ಕೊಲರ್ಸ್ ಆಫ್ ಹೈಯರ್ ಎಜುಕೇಶನ್ ಇನ್ಸ್ಟಿಟ್ಯೂಷನ್ಸ್ ಇನ್ ಬೆಂಗಳೂರು ರೀಜಿಯನ್ ” ಎಂಬ ಪ್ರಬಂಧಕ್ಕೆ ಭಾರತೀಯಾರ್ ಯೂನಿವರ್ಸಿಟಿಯು ಡಾಕ್ಟರೇಟ್ ಪದವಿ ನೀಡಿದೆ.
ಬಾಲ್ಯದಿಂದಲೇ ನೃತ್ಯ, ಸಂಗೀತ ಹಾಗೂ ಸಾಹಿತ್ಯದಲ್ಲಿ ಪರಿಣತಿ ಹೊಂದಿರುವ ಇವರಿಗೆ ಬೆಳ್ಳಾರೆ ಜೆ.ಸಿ ಸಂಸ್ಥೆಯ ವತಿಯಿಂದ” ಉತ್ತಮ ನಟಿ“ ಪ್ರಶಸ್ತಿ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಇವರಿಂದ 2004ರಲ್ಲಿ “ಅರಳು ಮಲ್ಲಿಗೆ “ಪ್ರಶಸ್ತಿ ದೊರೆತಿದೆ. ಇವರು ಕುದ್ಮಾರು ಗ್ರಾಮದ ದಿ.ನೂಜಿ ಲಿಂಗಪ್ಪ ಗೌಡ ಹಾಗೂ ದುಗ್ಗಮ್ಮರವರ ಪುತ್ರಿ ಹಾಗೂ ವನಸ್ಥ ಫುಡ್ ಅಂಡ್ ಪ್ರಾಡಕ್ಟ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಶ್ರೀಯುತ ನಟರಾಜ್ ಕಲ್ಯಾಣಿಯವರ ಪತ್ನಿ, ತೃಷಾ .ಎನ್ ಕಲ್ಯಾಣಿ ಮತ್ತು ದ್ರುವ್ .ಎನ್ ಕಲ್ಯಾಣಿ ಇವರ ಮಕ್ಕಳು.
ಶರ್ಮಿಳಾ ನಟರಾಜ್ ರವರು ಸ. ಹಿ. ಪ್ರಾ. ಶಾಲೆ ಕುದ್ಮಾರು, ಪದವಿಪೂರ್ವ ಕಾಲೇಜು ಕಾಣಿಯೂರು ಹಾಗೂ ಶಿವರಾಮ ಕಾರಂತ ಕಾಲೇಜು ಬೆಳ್ಳಾರೆ ಇಲ್ಲಿನ ಹಳೇವಿದ್ಯಾರ್ಥಿನಿಯಾಗಿರುತ್ತಾರೆ.ಮುಂದಿನ ಉನ್ನತ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಾಡಿರುತ್ತಾರೆ.