ಮಂಗಳೂರು: ಕಳೆದ ಒಂದು ತಿಂಗಳಿನಿಂದ ಕರ್ನಾಟಕದಲ್ಲಿ ಪ್ರೀತಿಗಾಗಿ 3 ಯುವತಿಯರ ಹತ್ಯೆ, ಏಪ್ರಿಲ್ 18 ರಂದು ಹುಬ್ಬಳ್ಳಿಯ ನೇಹಾ ಹತ್ಯೆ, ನಂತರ ಕೊಡಗಿನಲ್ಲಿ ಮೀನಾ ಹತ್ಯೆ, ಇದೀಗ ಮೇ 15ರಂದು ಹುಬ್ಬಳ್ಳಿಯ ಅಂಜಲಿ ಹತ್ಯೆ. ಪ್ರೀತಿಯ ಹೆಸರಲ್ಲಿ ಯುವತಿಯರ ಹತ್ಯೆ ಆಗುತ್ತಿರುವುದು ಬಹಳ ಕಳವಳಕಾರಿ ಸಂಗತಿಯಾಗಿದ್ದು ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ ಎಂದು ವಿಶ್ವ ಹಿಂದೂ ಪರಿಷದ್ ಮನವಿ ಮಾಡಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ವಿಎಚ್ ಪಿ, 2013 ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಬಂದಾಗ ಸಾಲು ಸಾಲು ಹಿಂದೂ ಯುವಕರ ಹತ್ಯೆಯಾಗಿದ್ದು ಇದೀಗ ಇದೇ ಸರಕಾರದಲ್ಲಿ ಹಿಂದೂ ಯುವತಿಯರ ಹತ್ಯೆ ಆಗುತ್ತಿರುವುದು ಗಂಭೀರ ವಿಷಯವಾಗಿದೆ . ಈ ಕೃತ್ಯಗಳು ಕರ್ನಾಟಕದಲ್ಲಿ ಹೆಣ್ಣು ಮಕ್ಕಳನ್ನು ಭಯಭೀತಗೊಳಿಸಿದೆ. ರಾಜ್ಯ ದಲ್ಲಿ ಈ ಸರಕಾರ ಬಂದನಂತರ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ .ಹಾಗಾಗಿ ರಾಜ್ಯ ಪೊಲೀಸ್ ಇಲಾಖೆಯು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಹಂತಕರಿಗೆ ಎನ್ಕೌಂಟರ್ ನಂತಹ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ನ ಶರಣ್ ಪಂಪ್ ವೆಲ್ ಆಗ್ರಹಿಸಿದ್ದಾರೆ.
ಶರಣ್ ಪಂಪ್ ವೆಲ್
ವಿಶ್ವ ಹಿಂದೂ ಪರಿಷದ್