ಪುತ್ತೂರು : ಅಶೋಕ್ ಕುಮಾರ್ ರೈ ಪುತ್ತೂರಿನ ಶಾಸಕರಾಗಿ ಒಂದು ವರ್ಷ ಪೂರೈಸಿದ್ದಾರೆ. ಒಂದು ವರ್ಷ ಪೂರೈಸಿದ್ದರಿಂದ ಪುತ್ತೂರಿನ ಬಿಜೆಪಿ ನಾಯಕರ ಮನೆಗಳಿಗೆ ಹಾಗೂ ಹಲವು ಉದ್ಯಮಗಳ ಮನೆಗೆ ತೆರಳಿ ತಮ್ಮ ಕಾರ್ಯವೈಖರಿ ಮೌಲ್ಯ ಮಾಪನಕ್ಕೆ ತೊಡಗಿಸಿಕೊಂಡಿದ್ದಾರೆ.
ಸಮಗ್ರ ಪುತ್ತೂರಿನ ಅಭಿವೃದ್ಧಿಯ ಕನಸನ್ನು ನನಸು ಮಾಡುವುದು ಮೊದಲನೇ ಆದ್ಯತೆ. ಶಾಸಕನಾದ ಬಳಿಕ ಜನರೊಂದಿಗೆ ಬೆರೆಯುವ ರೀತಿ, ನನ್ನಲ್ಲಿ ಏನಾದರೂ ತಪ್ಪಾಗಿದೆಯೇ? ತಿದ್ದಿಕೊಳ್ಳುವಂತಹ ವಿಚಾರ ಏನಾದರೂ ಇದೆಯೇ? ಪುತ್ತೂರು ಅಭಿವೃದ್ಧಿಯಾಗಬೇಕಾದರೆ ನಾನು ಏನು ಮಾಡಬೇಕು? ಪುತ್ತೂರು ಕ್ಷೇತ್ರದಲ್ಲಿರುವ ಮುಖ್ಯ ಸಮಸ್ಯೆಯಾದರೂ ಏನು? ಮೊದಲಾದ ವಿಚಾರಗಳನ್ನು ಮುಂದಿಟ್ಟು ತಿಳಿಯಲು ಉದ್ಯಮಿಗಳು, ಕೃಷಿಕರ ಬಳಿ ತೆರಳಿ ಮಾತುಕತೆ ನಡೆಸಲಾಯಿತು ಎಂದು ಅಶೋಕ್ ರೈ ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಕೃಷಿಕರಾದ ಸೇಡಿಯಾಪು ಜನಾರ್ಧನ ಭಟ್, ಬಂಗಾರಡ್ಕ ವಿಶ್ವೇಶ್ವರ ಭಟ್, ಉದ್ಯಮಿಗಳಾದ ಮಹಮ್ಮದ್ ಹಾಜಿ, ಬಲರಾಮ ಆಚಾರ್ಯ, ಸತ್ಯಶಂಕರ್ ಕೆ, ಗೋಪಾಲಕೃಷ್ಣ ಹೇರಳೆ ಹಾಗೂ ಚರ್ಚ್ ನ ಧರ್ಮ ಗುರುಗಳಾದ ಲಾರೆನ್ಸ್ ಮಸ್ಕರೇನಸ್ ಇವರ ಮನೆಗಳಿಗೆ ಭೇಟಿ ನೀಡಿ ಹಲವು ಅಮೂಲ್ಯ ಸಲಹೆಗಳನ್ನು ಸ್ವೀಕರಿಸಿದ್ದಾರೆ.