ಪುತ್ತೂರು: ಮುಕ್ರಂಪಾಡಿಯಲ್ಲಿರುವ ಮಹಿಳಾ ಪ ಪೂ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆ ಶನಿವಾರ ಕಾಲೇಜಿನಲ್ಲಿ ನಡೆಯಿತು.
ಶಾಸಕ ಅಶೋಕ್ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದು, ಕಾಲೇಜಿಗೆ ಈ ಬಾರಿ ಪಿಯು ಪರೀಕ್ಷೆಯಲ್ಲಿ ಶೇ. 100 ಪಲಿತಾಂಶ ಬಂದಿದ್ದು ಇದಕ್ಕಾಗಿ ಶಿಕ್ಷಕ ವೃಂದವನ್ನು, ಅಭಿವೃದ್ಧಿ ಸಮಿತಿಯವರನ್ನು ಶಾಸಕರು ಅಭಿನಂದಿಸಿದರು.
ಕಾಲೇಜಿನಲ್ಲಿ ತರಗತಿ ಕೊಠಡಿ ಕೊರತೆ, ಪ್ರಯೋಗಾಲಯ ಕೊಠಡಿ ಕೊರತೆ, ಪೀಠೋಪಕರಣಗಳ ಕೊರತೆ, ಆಟದ ಮೈದಾನದ ಕೊರತೆ, ರಸ್ತೆ ಸಂಪರ್ಕ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪ್ರಿನ್ಸಿಪಾಲರು ಶಾಸಕರ ಗಮನಕ್ಕೆ ತಂದರು. ಕಾಲೇಜಿಗೆ ಗೋಮಾಳ ಜಾಗವನ್ನು ಸೇರ್ಪಡೆ ಮಾಡುವ ಬಗ್ಗೆಯೂ ಚರ್ಚೆಗಳು ನಡೆದವು.
ಸಭೆಯಲ್ಲಿ ಮಾತನಾಡಿದ ಶಾಸಕರು, ಕಾಲೇಜಿನ ಅಭಿವೃದ್ಧಿ ಗಾಗಿ ಸಮಿತಿಯನ್ನು ಸರಕಾರ ನೇಮಿಸುತ್ತದೆ. ಈ ಸಮಿತಿಯವರು ಕಾಲೇಜಿನ ಕುಂದುಕೊರತೆಗಳ ಬಗ್ಗೆ ಅಧ್ಯಕ್ಷರ ಗಮನಕ್ಕೆ ತರಬೇಕಿತ್ತು, ಆದರೆ ಇಲ್ಲಿನ ಕೊರತೆಯ ವಿಚಾರವನ್ನು ನನ್ನ ಗಮನಕ್ಕೆ ತರುವಲ್ಲಿ ಸಮಿತಿ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜಿನ ಕೊರತೆಗಳನ್ನು ನೀಗಿಸಿ ಸಮಗ್ರ ಅಭಿವೃದ್ಧಿ ಗೆ ವಿಶೇಷ ಅನುದಾನವನ್ನು ಒದಗಿಸುವುದಾಗಿ ಶಾಸಕರು ತಿಳಿಸಿದರು
ನಗರಸಭಾ ಸದಸ್ಯೆ ಇಂದಿರಾ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಮಹಮ್ಮದಾಲಿ, ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಪುಡಾ ಸದಸ್ಯರಾದ ನಿಹಾಲ್ ಶೆಟ್ಟಿ, ಸುರೇಂದ್ರ ರೈ ಮೊಟ್ಟೆತ್ತಡ್ಕ, ಸುರೇಶ್ ಪೂಜಾರಿ , ರಫೀಕ್ ದರ್ಬೆ, ಕಾರ್ಯಾಧ್ಯಕ್ಷೆ ಮಲ್ಲಿಕಾ ಜೆ ರೈ, ಅಭಿವೃದ್ದಿ ಸಮಿತಿ ಸದಸ್ಯ ಚಂದ್ರಕಾಂತ್, ಉಪನ್ಯಾಸಕ ಚಿತ್ರಲೇಖ, ಬೋಜರಾಜ, ವಿಷ್ಣು ಭಟ್, ವಿ ಕೆ ಜೈನ್, ಜೆರೋಮಸ್ ಪಾಯಸ್, ಹರಿಣಾಕ್ಷ, ಅಬ್ದುಲ್ ಅಝೀಝ್ ಮುಕ್ರಂಪಾಡಿ, ರಫೀಕ್ ಎಂ ಕೆ, ಉಪನ್ಯಾಸಕಿಯರಾದ ನಿರ್ಮಲಾ ಎನ್, ಪ್ರಸನ್ನ ಕುಮಾರಿ , ಉಪಸ್ಥಿತರಿದ್ದರು.
ಪ್ರಿನ್ಸಿಪಾಲೆ ಪ್ರಮೀಳಾ ಡಿ ಕ್ರಾಸ್ತಾ ಸ್ವಾಗತಿಸಿದರು.. ಕಚೇರಿ ಸಿಬ್ಬಂದಿ ಉಷಾ ಉಪಸ್ಥಿತರಿದ್ದರು.