ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ, ಪ್ರಾಣಿಶಾಸ್ತ್ರ ವಿಭಾಗ ಹಾಗೂ ಇಕೋ ಕ್ಲಬ್ ಗಳ ಸಂಯುಕ್ತ ಆಶ್ರಯದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಒಂದು ದಿನದ ಶೈಕ್ಷಣಿಕ ಪ್ರವಾಸವನ್ನು ಕೈಗೊಂಡರು.
ಪ್ರಾರಂಭದಲ್ಲಿ ಕೊಯ್ಲದ ಪಶುಸಂಗೋಪನ ಕೇಂದ್ರಕ್ಕೆ ಭೇಟಿ ನೀಡಿ ಪಶು ಸಂರಕ್ಷಣೆ, ಅವುಗಳ ಆಹಾರ ಪದ್ಧತಿ, ಪಶುಗಳ ಆರೈಕೆಯ ವಿಧಾನಗಳು, ಮಾನವ ಕೃಷಿ ಪದ್ಧತಿ ಮತ್ತು ಪಶುಗಳ ನಡುವೆ ಇರುವ ಅವಿನಾಭಾವ ಸಂಬಂಧ ಮುಂತಾದ ವಿಷಯಗಳ ಬಗ್ಗೆ ಅಧ್ಯಯನ ನಡೆಸಿದರು. ನಂತರ ಅವರು ಕೋಳಿಸಾಕಣೆಯ ವಿವಿಧ ಹಂತಗಳ ಬಗ್ಗೆ ಅಧ್ಯಯನ ನಡೆಸಿದರು. ಬಳಿಕ ಅವರು ಮೂಡುಬಿದಿರಿಯ ಅಂಗಾಂಶ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಅಂಗಾಂಶ ಕೃಷಿಯ ಮಹತ್ವ, ರೋಗರಹಿತ ಸಸ್ಯಗಳನ್ನು ಉತ್ಪಾದಿಸುವ ಬಗ್ಗೆ ಸಸ್ಯ ಸಂವರ್ಧನೆ, ಸಂರಕ್ಷಣೆ ಮತ್ತು ಕೃಷಿಯಲ್ಲಿ ಅಂಗಾಂಶ ಸಂಸ್ಕೃತಿಯ ಪ್ರಾಮುಖ್ಯತೆಯ ಬಗ್ಗೆ ಹಾಗೂ ಅಂಗಾಂಶ ಕೃಷಿಯಲ್ಲಿರುವ ವಿಪುಲ ಸಂಶೋಧನಾವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಅವರು ಮೂಡುಬಿದಿರಿಯ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಗೆ ಭೇಟಿ ನೀಡಿ ಭಾರತೀಯ ಸಂಸೃತಿಯ ಶ್ರೀಮಂತಿಕೆಯ ಬಗ್ಗೆ, ಬಸದಿಯ ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಮಹತ್ವದ ಬಗ್ಗೆ ಅಧ್ಯಯನ ನಡೆಸಿದರು. ಒಟ್ಟಿನಲ್ಲಿ ಈ ಶೈಕ್ಷಣಿಕ ಪ್ರವಾಸವು ವಿದ್ಯಾರ್ಥಿಗಳಲ್ಲಿ ಜೀವ ವೈವಿಧ್ಯಗಳ ಬಗ್ಗೆ ಪ್ರಾಯೋಗಿಕ ಜ್ಞಾನ ನೀಡುವಲ್ಲಿ ಹಾಗೂ ಸಂಶೋಧನೆಗೆ ಇರುವ ವಿಪುಲ ಅವಕಾಶಗಳನ್ನು ತಿಳಿಯಲು ಸಹಕಾರಿಯಾಯಿತು.
ಜೀವ ವಿಜ್ಞಾನ ವಿಭಾಗದ 70 ವಿದ್ಯಾರ್ಥಿಗಳೊಂದಿಗೆ ಶಿಕ್ಷಕರಾದ ಸ್ಮಿತಾ ಆಳ್ವ, ಧನ್ಯಶ್ರೀ ಹಾಗೂ ಶ್ರೀರಕ್ಷಾಬಿ ವಿ ಶೈಕ್ಷಣಿಕ ಪ್ರವಾಸ ಕೈಗೊಂಡರು.