ವಿದ್ಯಾಮಾತಾ ಅಕಾಡೆಮಿಯಲ್ಲಿ ಸೇನಾ ನೇಮಕಾತಿಕೆ ಪೂರಕವಾಗಿ ಲಿಖಿತ ಪರೀಕ್ಷೆ ಹಾಗೂ ದೈಹಿಕ ಸದೃಢತೆ ತರಬೇತಿ | ಜೂನ್ 9 ರಿಂದ ಪ್ರತೀ ಭಾನುವಾರ ತರಬೇತಿ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ದ್ವಾರಕಾ ಕನ್‍ ಸ್ಟ್ರಕ್ಷನ್ ರವರ ಸಹಭಾಗಿತ್ವದಲ್ಲಿ ಜೂನ್ 9 ರಿಂದ ಪ್ರತಿ ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ಸೇನಾ ನೇಮಕಾತಿಗಳಿಗೆ ಅನ್ವಯವಾಗುವಂತೆ ಲಿಖಿತ ಪರೀಕ್ಷೆ ಮತ್ತು ದೈಹಿಕ ಸದೃಢತೆಯ ತರಬೇತಿಗಳು ಪ್ರಾರಂಭವಾಗಲಿದೆ.

ಭಾರತೀಯ ಸೇನಾ ನೇಮಕಾತಿಗಳು / ರೈಲ್ವೆ ಪೊಲೀಸ್ / ಅರೆ ಸಶಸ್ತ್ರ ಮೀಸಲು ಪಡೆಗಳು ಸೇರಿದಂತೆ ಎಲ್ಲಾ ರೀತಿಯ ಸಶಸ್ತ್ರ ಪಡೆಗಳ (Armed Forces) ನೇಮಕಾತಿಗಳ ಲಿಖಿತ ಪರೀಕ್ಷೆಗಳು, ದೈಹಿಕ ಸದೃಢತೆಯ ಪರೀಕ್ಷೆಗಳಿಗೆ ಒಂದೇ ಸೂರಿನಡಿಯಲ್ಲಿ ವಿದ್ಯಾಮಾತಾ ಅಕಾಡೆಮಿಯು ‘ದ್ವಾರಕಾ ಕನ್‍ ಸ್ಟ್ರಕ್ಷನ್’ ರವರ ಪ್ರಾಯೋಜಕತ್ವದಲ್ಲಿ ತರಬೇತಿಯನ್ನು ನೀಡಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕಳೆದ 2 ವರ್ಷಗಳಿಂದ 18 ಅಭ್ಯರ್ಥಿಗಳನ್ನು ತರಬೇತಿಗೊಳಿಸಿ ಆಯ್ಕೆಯಾಗಲು ಕಾರಣವಾದ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯು ಸೇನೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಭಾಗದಿಂದ ಆಯ್ಕೆಯಾಗಬೇಕೆಂಬ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿಸಲಾಗುತ್ತಿದೆ. ಉಚಿತ ತರಬೇತಿಗೆ ಅರ್ಜಿ ಸಲ್ಲಿಸುವವರಿಗೆ 17 ವರ್ಷದಿಂದ 23 ವರ್ಷದವರೆಗಿನವರೆಗೆ ಅವಕಾಶ ಇರುತ್ತದೆ. ಸದ್ಯ ಓದುತ್ತಿರುವವರು / ಓದು ಮುಗಿಸಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಯು ಪುತ್ತೂರು ಮತ್ತು ಸುಳ್ಯದಲ್ಲಿ ಲಭ್ಯವಿರುತ್ತದೆ. ಉಚಿತ ತರಬೇತಿಗೆ ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 31/05/2024ವಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಆಧಾ‌ರ್ ಮತ್ತು 2ಪಾಸ್ ಪೋರ್ಟ್ ಸೈಜ್ ಫೋಟೋ ನೀಡಿ ನೋಂದಾಯಿಸಿಕೊಳ್ಳಬೇಕು.



































 
 

ಹೆಚ್ಚಿನ ಮಾಹಿತಿಗಾಗಿ :

ಪುತ್ತೂರು ಕಛೇರಿ : ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೇಕ್ಸ್ ಎಪಿಯಂಸಿ ರಸ್ತೆ ಪುತ್ತೂರು. ದ.ಕ

ಮೊ: 9620468869/9148935808

ಸುಳ್ಯ ಶಾಖೆ : ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239

ಮೊ: 9448527606

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top