80 ವರ್ಷಗಳ ವಸ್ತ್ರ ಪರಂಪರೆಯಲ್ಲಿ ಪ್ರಸಿದ್ಧ ಪಡೆದ ‘ಎಂ.ಸಂಜೀವ ಶೆಟ್ಟಿ’ ಸಾರೀಸ್ & ರೆಡಿಮೇಡ್ಸ್ | ನೂತನ ಮಳಿಗೆ ದರ್ಬೆ ವೃತ್ತದ ಬಳಿ ಶುಭಾರಂಭ

ಪುತ್ತೂರು: 80 ವರ್ಷಗಳ ವಸ್ತ್ರ ಪರಂಪರೆಯಲ್ಲಿ ಪ್ರಸಿದ್ಧಿ ಪಡೆದ ‘ಎಂ.ಸಂಜೀವ ಶೆಟ್ಟಿ’ ಸಾರೀಸ್ & ರೆಡಿಮೇಡ್ಸ್ ನ ನೂತನ ಮಳಿಗೆ ದರ್ಬೆ ವೃತ್ತದ ಬಳಿ ಇಂದು ಶುಭಾರಂಭಗೊಂಡಿತು.

ಸಂಸ್ಥೆಯನ್ನು ಉದ್ಯಮಿ ವಾಮನ್ ಪೈ ಉದ್ಘಾಟಿಸಿ ಮಾತನಾಡಿ, ವ್ಯಾಪಾರದಲ್ಲಿ ಕಮಿಟ್ಮೆಂಟ್ ಹಾಗೂ ಡೆಡಿಕೇಶನ್ ಎರಡೂ ಬೇಕು. ಜತೆಗೆ ವ್ಯಾಪಾರ ಎಂಬುದು ಒಂದು ತಪಸ್ಸು. ಇಂದು ಎಂ.ಸಂಜೀವ ಶೆಟ್ಟಿ ಅವರ ಪ್ರಯತ್ನದ ಫಲವಾಗಿ 5ನೇ ಶಾಖೆ ದರ್ಬೆ ವೃತ್ತದ ಬಳಿ ಶುಭಾರಂಭಗೊಂಡಿದೆ. ಮಳಿಗೆ ಮಂಗಳೂರು ಅಲ್ಲದೆ ಬೆಂಗಳೂರಿನಲ್ಲಿ ಮನೆಮಾತಾಗಿದೆ. ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಂಜೀವ ಶೆಟ್ಟಿ ಅವರ ಹಿತೈಷಿ, ಅಭಿಮಾನಿಯಾಗಿ ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ವಸ್ತ್ರ ಉದ್ಯಮವನ್ನು ಹತ್ತೂರಿಗೆ ಪರಿಚಯಿಸಿದ ಕೀರ್ತಿ ದಿ.ಸಂಜೀವ ಶೆಟ್ಟರಿಗೆ ಸಲ್ಲುತ್ತದೆ. ವಸ್ತ್ರ ಉದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ದ.ಕ. ಜಿಲ್ಲೆಯಲ್ಲಿ ಪ್ರಾಮಾಣಿಕತೆ ಮತ್ತು ಸಮಯಪ್ರಜ್ಞೆಯ ವ್ಯಾಪಾರ ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಜತೆಗೆ ಕುಟುಂಬದವರು ಅದೇ ದಾರಿಯಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದ ಅವರು, ಆಧುನಿಕತೆಗೆ ತಕ್ಕಂತೆ ಯುವ ಪೀಳಿಗೆಗೆ ಬೇಕಾದ ವಸ್ತ್ರಗಳು, ಮದುವೆ, ಇನ್ನಿತರ ಶುಭ ಸಮಾರಂಭಗಳಿಗೆ ಬೇಕಾದ ವಸ್ತ್ರಗಳನ್ನು ಒಂದೇ ಮಳಿಗೆಯಲ್ಲಿ ಒದಗಿಸುವ ಮೂಲಕ ಪುತ್ತೂರು ಹಾಗೂ ಜಿಲ್ಲೆಯ ಎಲ್ಲಾ ಜನರ ಅನುಕೂಲತೆಗೆ ಅಕ್ಷಯ ತೃತೀಯ ದಿನದಂದು ಲೋಕಾರ್ಪಣೆ ಮಾಡುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನಷ್ಟು ಮಳಿಗೆಗಳನ್ನು ತೆರೆದು ಸೇವೆ ನೀಡುವಂತಾಗಲಿ ಎಂದರು.



































 
 

ಉದ್ಯಮಿ ವಿಶ್ವಾಸ್ ಶೆಣೈ ಮಾತನಾಡಿ, ಸಂಸ್ಥೆ ದ.ಕ.ದಲ್ಲಿ ಹೆಸರುವಾಸಿಯಾಗಿದೆ. ದರ್ಬೆ ಪರಿಸರದಲ್ಲಿ ಇಂತಹಾ ಮಳಿಗೆ ಅಗತ್ಯವಿದ್ದು, ಇದೀಗ ಶುಭಾರಂಭಗೊಂಡಿದೆ. ಈ ನಿಟ್ಟಿನಲ್ಲಿ ದರ್ಬೆ ಪರಿಸರದ ಸಹಕಾರ ಯಾವತ್ತೂ ಸಂಸ್ಥೆಗೆ ಇದೆ ಎಂದು ತಿಳಿಸಿದರು.

ಸಂಸ್ಥೆಯ ಮುರಳೀಧರ ಮಾತನಾಡಿ, ಫ್ಯಾಶನ್ ಗಳು ಆಗಾಗ ಬದಲಾವನಣೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ವಸ್ತ್ರ ಉದ್ಯಮದಲ್ಲಿ ತೊಡಗಿಕೊಂಡವರು ಅಪ್ಡೇಟ್ ಆಗುತ್ತಿರಬೇಕು. ಕಳೆದ 80 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ನಾವು ಒದಗಿಸುತ್ತಾ ಬಂದಿದ್ದೇವೆ ಎಂದರು.

ಸಮಾರಂಭದಲ್ಲಿ ಪೊಪ್ಯುಲರ್ ಸ್ವೀಟ್ಸ್ ಮಾಲಕ ನರಸಿಂಹ ಕಾಮತ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಾರಾಮ್, ಕಟ್ಟಡ ಮಾಲಕ ಕವನ್ ನಾಯ್ಕ್, ಕೆ.ಎಂ.ಇಸ್ಮಾಯಿಲ್, ನರೇಂದ್ರ ಚೋಪ್ರಾ, ಸುಮತಿ ಡಿ.ನಾಯ್ಕ್ ಶುಭ ಹಾರೈಸಿದರು.

ಕುಟುಂಬದ ಹಿರಿಯ ಸದಸ್ಯ ಸತೀಶ್, ಸಂಸ್ಥೆಯ ಶಿವಶಂಕರ್, ಗಿರಿಧರ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮಾ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top