ಬೆಂಗಳೂರು : 2024ನೇ ಸಾಲಿನ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದ ಪ್ರಕ್ರಿಯೆ ಪ್ರಗತಿಯಲ್ಲಿ ಸಾಗಿದೆ.
ಬೆಳಗ್ಗೆ ಗಂಟೆ 7 ರಿಂದ ಮತದಾನ ಶುರುವಾಗಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ದೇಶದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ದೇಶದಲ್ಲಿ ಶೇಕಡಾ 40ರಷ್ಟು ಮತ್ತು ಕರ್ನಾಟಕದಲ್ಲಿ ಶೇ. 41.59ರಷ್ಟು ಮತದಾನವಾಗಿದೆ.
ಚಿಕ್ಕೋಡಿಯಲ್ಲಿ ಶೇ 45 ರಷ್ಟು, ಉತ್ತರ ಕನ್ನಡದಲ್ಲಿ ಶೇ 44.22 ರಷ್ಟು, ಶಿವಮೊಗ್ಗದಲ್ಲಿ ಶೇ 44.98 ರಷ್ಟು, ಬೆಳಗಾವಿಯಲ್ಲಿ ಶೇ.40.57 ರಷ್ಟು, ಬಳ್ಳಾರಿಯಲ್ಲಿ ಶೇ 44.36ರಷ್ಟು, ದಾವಣಗೆರೆಯಲ್ಲಿ ಶೇ 42.32 ರಷ್ಟು, ಕೊಪ್ಪಳದಲ್ಲಿ ಶೇ 42.74 ರಷ್ಟು, ಕಲಬುರಗಿಯಲ್ಲಿ ಶೇ 37.48 ರಷ್ಟು, ಉತ್ತರ ಕನ್ನಡದಲ್ಲಿ ಶೇ 44.22 ರಷ್ಟು, ಶಿವಮೊಗ್ಗದಲ್ಲಿ ಶೇ.44.98 ರಷ್ಟು, ಬೆಳಗಾವಿಯಲ್ಲಿ ಶೇ.40.57 ರಷ್ಟು, ಬಳ್ಳಾರಿಯಲ್ಲಿ ಶೇ 44.36 ರಷ್ಟು, ದಾವಣಗೆರೆಯಲ್ಲಿ ಶೇ 42.32 ರಷ್ಟು, ಕೊಪ್ಪಳದಲ್ಲಿ ಶೇ 42.74 ರಷ್ಟು, ಕಲಬುರಗಿಯಲ್ಲಿ ಶೇ 37.48 ರಷ್ಟು ಮತದಾನವಾಗಿದೆ.