ಪುತ್ತೂರು : ಪುತ್ತೂರು ಬಾರ್ ಅಸೋಸಿಯೇಶನ್ ವಾರ್ಷಿಕ ದಿನಾಚರಣೆ, ಅಭಿನಂದನಾ ಕಾರ್ಯಕ್ರಮ ಹಾಗೂ ಪುತ್ತೂರು ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮೇ.2 ರಂದು ಪುತ್ತೂರು ಬಾರ್ ಅಸೋಸಿಯೇಶನ್ ನ ಪರಾಶರ ಹಾಲ್ ನಲ್ಲಿ ನಡೆಯಲಿದೆ.
ಹೈಕೋರ್ಟ್ ನ್ಯಾಯಾಧೀಶರಾದ ಎಸ್. ವಿಶ್ವಜಿತ್ ಶೆಟ್ಟಿ, ಹಿರಿಯ ವಕೀಲರಾದ ಎಂ. ರಾಮ್ ಮೋಹನ್ ರಾವ್, ಪಿಬಿಎ ಮಾಜಿ ಅಧ್ಯಕ್ಷರಾದ ಬಿ. ನಿರ್ಮಲ್ ಕುಮಾರ್ ಜೈನ್, ಪಿಬಿಎ ಅಧ್ಯಕ್ಷರಾದ ಜಗನ್ನಾಥ ಜಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪದಾಧಿಕಾರಿಗಳ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೇ.2 ರಂದು ಸಂಜೆ 4.30ರಿಂದ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ರಿಂದ ವಾರ್ಷಿಕ ದಿನಾಚರಣೆ ಪ್ರಯುಕ್ತ ಫೋಟೋ ಸೆಷನ್, ಡಿನ್ನರ್, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.