ಪುತ್ತೂರು: ರಥಸಪ್ತಮಿ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ ನಡೆಯಿತು.
ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉದ್ಘಾಟಿಸಿದರು. ವ್ಯವಸ್ಥಾಪನಾ ಸಮಿತಿ ರಾಮದಾಸ ಗೌಡ, ಸಮಿತಿಯ ಪ್ರಾಂತ ಸಂಚಾಲಕ ಹರೀಶ್, ಕಾರ್ಯಕ್ರಮ ಸಂಚಾಲಕ ರಾಮಚಂದ್ರ, ಸಮಿತಿಯ ಮಹಾಲಿಂಗೇಶ್ವರ ಶಾಖೆಯ ಮುಖ್ಯ ಶಿಕ್ಷಕಿ ಆಶಾಲತಾ ಮೊದಲಾದವರು ಉಪಸ್ಥಿತರಿದ್ದರು.
ಅ.ರಾ. ರಾಮಸ್ವಾಮಿ ಅವರ ಉಪಸ್ಥಿತಿಯಲ್ಲಿ ನಡೆದ ಗಣಪತಿ ನಮಸ್ಕಾರ, ಷಣ್ಮುಖ ನಮಸ್ಕಾರ, ಚಂದ್ರ ನಮಸ್ಕಾರ, ದುರ್ಗಾ ನಮಸ್ಕಾರ, ಶಿವ ನಮಸ್ಕಾರ, ಹನುಮಾನ್ ನಮಸ್ಕಾರ, ವಿಷ್ಣು ನಮಸ್ಕಾರ ಹಾಗೂ 108 ಸೂರ್ಯ ನಮಸ್ಕಾರ ನಡೆಯಿತು.
ರಥಸಪ್ತಮಿ ಬಗ್ಗೆ ಆಶಾಲತಾ ಅವರು ಬೌದ್ಧಿಕ್ ನೀಡಿದರು. ಹರಿಪ್ರಸಾದ್, ರವಿರಾಜ್, ರಶ್ಮಿ, ಸೌಮ್ಯ, ಕೃಷ್ಣಾನಂದ ಶಿಕ್ಷಕರಾಗಿ ಸಹಕರಿಸಿದರೆ, ಅನ್ವಿತಾ, ಕೇದಾರ್, ಕುಮೇಶ್, ಮಿಲಿಶಾ, ಅಶೋಕ್, ಗಂಗಾಧರ್, ರಾಜೇಶ್, ಸುಜಾತ, ಮಲ್ಲಿಕಾ, ಸ್ಪೂರ್ತಿ, ಸುಲತಾ, ಪ್ರದೀಪ, ರಾಮಕೃಷ್ಣ, ರಾಮಚಂದ್ರ, ವಸಂತ, ಕೃತಿ, ಶ್ರೀಲತ, ಸರೋಜ, ಶ್ರೀನಿಧಿ, ಗಣೇಶ್ ಎನ್. ಕಲ್ಲರ್ಪೆ, ಗೋಕುಲ್, ಪವಿತ್ರ, ಪ್ರೇಮಲತಾ, ನಮಿತ, ಗಂಗಾಧರ, ಮಲ್ಲಿಕಾ, ಶಾಂತ, ಜ್ಯೋತಿ ಪ್ರಾತ್ಯಕ್ಷಿಕೆಯಲ್ಲಿ ಸಹಕರಿಸಿದರು.
ರೇಣುಕಾ ಭಜನೆ ಹಾಡಿದರು. ಮಂಜುಳಾ ದೇವಿ ಸ್ವಾಗತಿಸಿದರು. ಸೌಮ್ಯ ಅಮೃತ ವಚನ ವಾಚಿಸಿದರು. ನಳಿನಿ ಪಂಚಾಂಗ ವಾಚಿಸಿದರು. ರಾಮಚಂದ್ರ ವಂದಿಸಿದರು. ನಳಿನಿ ಮಂತ್ರ ಪಠಿಸಿದರು.
ಅಖಂಡ ಸೂರ್ಯನಮಸ್ಕಾರ:
ಬಳಿಕ ರಥಸಪ್ತಮಿ ಅಂಗವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಅಖಂಡ ಸೂರ್ಯ ನಮಸ್ಕಾರ ನಡೆಯಿತು. ವಿವಿಧ ಶಾಖೆಯ ಯೋಗಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.