ಪುತ್ತೂರು: ಏ.22 ರಿಂದ 27ರ ತನಕ ನಡೆದ ಎವಿಜಿ ಬೇಸಿಗೆ ಶಿಬಿರ -2024 ಸಮಾರೋಪ ಸಮಾರಂಭದೊಂದಿಗೆ ಇಂದು ಸಂಪನ್ನಗೊಂಡಿತು.
ಶಾಲಾ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಸಮಾರೋಪ ಭಾಷಣ ಮಾಡಿ ಶಿಬಿರದ ವೈಶಿಷ್ಟ್ಯತೆಗಳನ್ನು ಕೊಂಡಾಡಿದರು.
ಮುಖ್ಯ ಅತಿಥಿಯಾಗಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ಮತ್ತೋರ್ವ ಮುಖ್ಯ ಅತಿಥಿ, ಐ.ಆರ್ ಸಿ.ಎಂ.ಡಿ. ಸಂಸ್ಥೆಯ ನಿರ್ದೇಶಕಿ ಪ್ರಫುಲ್ಲಾ ಗಣೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಕಲಾವಿದ ಅಶೋಕ್ ಬನ್ನೂರು ಅವರನ್ನು ಸನ್ಮಾನಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಧನಂಜಯ ಮರ್ಕಂಜ, ಪ್ರವೀಣ್ ಪರ್ಣಕುಟೀರ, ದಿನೇಶ್ ಸಾಮೆತ್ತಡ್ಕ, ಪ್ರಭಾ ದಿನೇಶ್, ಉಲ್ಲಾಸ್ ಪೈ ಮತ್ತು ರಾಕೇಶ್ ಆಚಾರ್ಯ ಸಹಕರಿಸಿದ್ದರು. ಸುಮಾರು 40 ಮಕ್ಕಳು ಭಾಗವಹಿಸಿದ್ದ ಶಿಬಿರದ ಶಿಬಿರಾರ್ಥಿಗಳಿಂದ ರಾಕೇಶ್ ಆಚಾರ್ಯರ ನಿರ್ದೇಶನದಲ್ಲಿ “ಮಕ್ಕಳ ರಾಜ್ಯ” ನಾಟಕ ಪ್ರದರ್ಶನ ನಡೆಯಿತು.
ಶಾಲಾ ಉಪಾಧ್ಯಕ್ಷ ಉಮೇಶ್ ಮಳುವೇಲು ಉಪಸ್ಥಿತರಿದ್ದರು. ಶಾಲಾ ಸಂಚಾಲಕ ಎ. ವಿ. ನಾರಾಯಣ ಸ್ವಾಗತಿಸಿದರು. ಶಿಬಿರ ಸಂಯೋಜಕಿ ಸಂಹಿತಾ ವಂದಿಸಿದರು. ಶಿಕ್ಷಕಿ ಯಶುಭಾ ರೈ ವಂದಿಸಿದರು.