ಪುತ್ತೂರು: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ರಾಷ್ಟ್ರಮಟ್ಟದ ಜೆಇಇ ಮೈನ್ ಪರೀಕ್ಷೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯದ್ಭುತ ಸಾಧನೆ ಮಾಡಿದ್ದಾರೆ.
ಪರೀಕ್ಷೆಗೆ ಹಾಜರಾದ 87 ವಿದ್ಯಾರ್ಥಿಗಳಲ್ಲಿ 81 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಗಳಿಸಿ ಗಮನ ಸೆಳೆದಿದ್ದಾರೆ. 14 ವಿದ್ಯಾರ್ಥಿಗಳು 95 ಕ್ಕಿಂತಲೂ ಅಧಿಕ ಪರ್ಸೆಂಟೈಲ್ ಫಲಿತಾಂಶ ಪಡೆದಿದ್ದು, 28 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸೆಂಟೈಲ್ ಗಳಿಸಿ ಉತ್ಕೃಷ್ಟ ಫಲಿತಾಂಶ ನೀಡಿದ್ದಾರೆ.
ಕೆ ಪ್ರಮಿತ್ ರೈ 99.84 ಪರ್ಸೆಂಟೈಲ್ ಅಂಕಗಳೊಂದಿಗೆ ಇಡಬ್ಲ್ಯುಎಸ್ ವಿಭಾಗದಲ್ಲಿ 343ನೇ ರ್ಯಾಂಕ್ ಹಾಗೂ ಸಿಆರ್‌ಎಲ್ ವಿಭಾಗದಲ್ಲಿ 2696 ನೇ ರ್ಯಾಂಕ್ ಗಳಿಸಿದರೆ, ಆಕಾಶ್ ಶಿರಂತಡ್ಕ 99.47 ಪರ್ಸೆಂಟೈಲ್ ಅಂಕಗಳೊಂದಿಗೆ ಸಿಆರ್‌ಎಲ್ ವಿಭಾಗದಲ್ಲಿ 8656 ನೇ ರ್ಯಾಂಕ್ ದಾಖಲಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆದಿದ್ದಾರೆ.
ಪುತ್ರ ರಾಹುಲ್ ಎ.ಎಸ್. 97.94 ಪರ್ಸೆಂಟೈಲ್, ಶಾರ್ವರಿ ಎಸ್. 97.90, ಶೃಂಗ ನಾಯಕ್ ಪಿ 97.31, ಅನುಶ್ರೀ ಎ.ಎಸ್.96.79, ಅಭಿರಾಮ ಕೆ. ಟಿ. 96.71, ವಿಶಾಂತ್ 96.16, ಅನುನಯ ಎಸ್. ಭಂಡಾರಿ 95.72, ನಿಧಿ ಎನ್. ಆಚಾರ್ಯ 95.62, ವರುಣ್ ಎಮ್.95.43, ಅಭಿಶ್ರೀ ಎ.ಎಸ್. 95.16, ಗಗನ್‌ದೀಪ್ ರೈ 95.09, ಚೈತನ್ಯ ಬಿ. 95, ಪರ್ಸೆಂಟೈಲ್ ಗಳಿಸಿ ಅತ್ಯುತ್ತಮ ರ್ಯಾಂಕ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಬೋಧಕ – ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.