ಪುತ್ತೂರು: ಸಂಪ್ಯದಿಂದ ಕುಂಜೂರು ಪಂಜ ದೇವಸ್ಥಾನ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ 50 ಲಕ್ಷ ರೂಪಾಯಿ ಅನುದಾನ ನೀಡಿದ್ದು, ಕಾಮಗಾರಿಗೆ ಜ. 27ರಂದು ಚಾಲನೆ ನೀಡಲಾಯಿತು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ತಾಯಿಯ ಪಾತ್ರ ನಿರ್ವಹಿಸುತ್ತಾರೆ. ಹಲವು ಮಕ್ಕಳನ್ನು ತನ್ನ ಮಕ್ಕಳಂತೆ ಶಿಕ್ಷಕರು ಪೋಷಿಸುತ್ತಾರೆ, ಶಿಕ್ಷಣ ನೀಡುತ್ತಾರೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಪ್ರೋತ್ಸಾಹ ನೀಡುತ್ತಾ, ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡುವ ಕೆಲಸವೂ ಶಾಲೆಗಳಲ್ಲಿ ಆಗುತ್ತದೆ ಎಂದರು.
ಪ್ರೀತಮ್ ಪುತ್ತೂರಾಯ ಮಾತನಾಡಿ, ಮುಂದಿನ ಪೀಳಿಗೆಗೆ ಅನುಕೂಲ ಆಗುವಂತೆ ಕುಂಜೂರುಪಂಜದಿಂದ ಸಂಪ್ಯ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇದು ದೇವಸ್ಥಾನಕ್ಕೆ ಪ್ರಯೋಜನವಾಗುವ ಜೊತೆಗೆ ಬಹಳಷ್ಟು ಶಾಲಾ ಮಕ್ಕಳಿಗೂ ಅನುಕೂಲವಾಗಲಿದೆ ಎಂದರು.
ಇದೇ ಸಂದರ್ಭ ಶಾಸಕ ಸಂಜೀವ ಮಠಂದೂರು ಅವರನ್ನು ಸನ್ಮಾನಿಸಲಾಯಿತು. ಆರ್ಯಾಪು ನಗರ ಬೂತ್ ಅಧ್ಯಕ್ಷ ಉಮೇಶ್ ಆಚಾರ್ಯ ಕುಕ್ಕಾಡಿ, ನಗರಸಭಾ ಸದಸ್ಯರಾದ ಶೀನಪ್ಪ ನಾಯ್ಕ್, ಜಯಂತ್ ಶೆಟ್ಟಿ, ವಿಶ್ವನಾಥ್ ಕುಲಾಲ್, ಮಂಜಪ್ಪ ರೈ, ವಿಕ್ರಂ ಜೈನ್, ಲತಾ ಎಸ್. ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.