ದೇವಸ್ಥಾನಗಳು ಧಾರ್ಮಿಕ, ಸಾಂಸ್ಕೃತಿಕವಾಗಿ ಜನರನ್ನು ಒಟ್ಟುಗೂಡಿಸುತ್ತದೆ |  ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ನನ್ಯ ಅಚ್ಯುತ ಮೂಡೆತ್ತಾಯ

ಪುತ್ತೂರು: ದೇವಸ್ಥಾನಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಜನರನ್ನು ಒಟ್ಟು ಸೇರಿಸುತ್ತದೆ. ಜೀವನಕ್ಕೆ ಪೂರಕವಾದ ಸಂಸ್ಕಾರಗಳ ಸಂದೇಶ‌ ನೀಡಲಿದೆ. ಎಲ್ಲಾ ವರ್ಗದ ಜನರನ್ನು ಒಟ್ಟು ಸೇರಿಸಿ ಊರಿಗೆ ಒಗ್ಗಟ್ಟು ತರುವ ಕೆಲಸ ದೇವಸ್ಥಾನದ ಮೂಲಕ ನಡೆಯುತ್ತಿದೆ ಎಂದು ಶ್ರೀಕ್ಷೇತ್ರ ಹನುಗಿರಿಯ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಹೇಳಿದರು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಎ.23ರಂದು ನಡೆದ  ಎರಡನೇ ದಿನದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವಸ್ಥಾನಗಳಲ್ಲಿ ಯಾವುದೇ ಕಾರ್ಯಗಳು ನಡೆಯಬೇಕಾದರೆ ದೈವ ಸಂಕಲ್ಪಮಯ ದೇವರ ತೀರ್ಮಾನದಂತೆ ಎಲ್ಲಾ ಕಾರ್ಯಗಳು ನಡೆಯಲಿದೆ. ಕಾರ್ಪಾಡಿಯ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶಗಳು ಅತ್ಯಂತ ಅನುಭವದಲ್ಲಿ ಮೂಡಿಬಂದಿದೆ.  ಊರಿನವರ ಒಗ್ಗಟ್ಟು ಇಲ್ಲಿ ಕಾಣಬಹುದು. ದೇವರ ಬ್ರಹ್ಮಕಲಶ ನಡೆದು ಬಿಂಬ ಚೈತನ್ಯವಾಗಿ, ಕ್ಷೇತ್ರ ವೃದ್ಧಿಯಾಗಲಿದೆ. ಭಕ್ತರ ಇಷ್ಟಾರ್ಥಗಳು ನೆರವೇರಲಿದೆ. ಕ್ಷೇತ್ರದಲ್ಲಿ ನಿತ್ಯ ನೈಮಿತ್ಯಾಧಿಗಳು ಹಾಗೂ ಉತ್ಸವಗಳು ವಿಧಿವತ್ತಾಗಿ ನಡೆಸಿಕೊಂಡು ಕ್ಷೇತ್ರವನ್ನು ಮುಂದುವರಿಸಬೇಕು ಎಂದರು.



































 
 

ಮುಖ್ಯ ಅತಿಥಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ  ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಗ್ರಾಮ ದೇವಸ್ಥಾನದ ಜೀರ್ಣೋದ್ಧಾರ ನಡೆಸಿ, ಬ್ರಹ್ಮಕಲಶೋತ್ಸವ ನೆರವೇರಿಸುವ ಮೂಲಕ ಜನರು ಪುನೀತರಾಗುವ ಸುಸಂದರ್ಭದಲ್ಲಿದ್ದೇವೆ. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕುಂಠಿತವಾಗದೇ  ಭಕ್ತಾದಿಗಳಿಂದ ಕ್ಷೇತ್ರ ಬೆಳಗುವ ಕಾರ್ಯ ನಿರಂತರವಾಗಿರಬೇಕು. ಕನಿಷ್ಠ ವಾರದಲ್ಲಿ ಒಂದು ದಿನವಾದರೂ ಕ್ಷೇತ್ರಕ್ಕೆ ಆಗಮಿಸಿ, ಕ್ಷೇತ್ರದ ಅಂದ, ಚಂದ ಉಳಿಸುವ ಕಾರ್ಯವಾಗಬೇಕು ಎಂದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೆ.ಎಸ್ ರವೀಂದ್ರನಾಥ ರೈ ಬಳ್ಳಮಜಲು ಮಾತನಾಡಿ, ಊರಿನ ದೇವಸ್ಥಾನವನ್ನು ಜೀರ್ಣೋದ್ಧಾರ ನಡೆಸಿ ಬ್ರಹ್ಮಕಲಶ ನೆರವೇರಿಸುವ ಮೂಲಕ ಗ್ರಾಮದ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿ ಮನಸಂತೋಪ ಪಡೆಯಬಹುದು. ಭಕ್ತರ ಸಹಕಾರ ದೇವಸ್ಥಾನಕ್ಕೆ ನಿರಂತರವಾಗಿರಬೇಕು. ದೇವಸ್ಥಾನಗಳು ರಾಜಕೀಯ ರಹಿತವಾಗಿರಬೇಕು ಎಂದರು.

ಉದ್ಯಮಿ ಹರ್ಷಕುಮಾರ್ ರೈ ಮಾಡಾವು ಮಾತನಾಡಿ, ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಬಲಿಷ್ಠ ನಾಯಕತ್ವ ಭಕ್ತರ ಸಹಕಾರ ಅಗತ್ಯ. ಇದಕ್ಕೆಲ್ಲಾ ನಿದರ್ಶನ ಕಾರ್ಪಾಡಿಯಲ್ಲಿದೆ. ಎಲ್ಲರ ಕಠಿಣ ಪರಿಶ್ರಮದಿಂದ ಭವ್ಯ ದೇಗುಲ ನಿರ್ಮಾಣವಾಗಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರದ ಜೀರ್ಣೋದ್ಧಾರಕ್ಕೆ ಮುಂದಡಿಯಿಟ್ಟ ಸುಧಾಕರ ರಾವ್ ರವರ ಎಲ್ಲಾ ಕೆಲಸಗಳಲ್ಲಿಯೂ ಗಮನಹರಿಸಿದವರು. ಕ್ಷೇತ್ರದ ಜೀರ್ಣೋದ್ಧಾರಕ್ಕೆ ಉದಾರವಾಗಿ ಜಾಗ ನೀಡಿದವರಿದ್ದಾರೆ. ಸ್ವಯಂಸೇವಕರ ಸಹಕಾರ, ಊರ, ಪರವೂರ ದಾನಿಗಳ ಸಹಕಾರದಿಂದ ಜೀರ್ಣೋದ್ಧಾರ ಅತ್ಯುತ್ತಮ ವಾಗಿ ಮೂಡಿಬಂದಿದೆ. ಇಲ್ಲಿನ ಬ್ರಹ್ಮಕಲಶೋತ್ಸವದ ಮೂಲಕ ಪ್ರಪಂಚಕ್ಕೆ ಒಳಿತಾಗಲಿ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ್, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ಸುಧಾ ನಾಗೇಶ್ ರಾವ್, ಉದ್ಯಮಿ ಶಿವಶಂಕರ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು.

ನಿವೃತ್ತ ಸೈನಿಕ ಸತೀಶ್ ಗೌಡ, ನಿವೃತ್ತ ಎಸ್.ಐ ರಾಮ ನಾಯ್ಕ, ಶಿವರಾಮ ಕಾರಂತ ಶಿವಕೃಪಾ ಆರ್ಯಾಪು, ಯಮುನಾ ಬೋರ್‌ವೆಲ್ಸ್ ಮ್ಹಾಲಕಿ ದಿವ್ಯಾ ಕೃಷ್ಣ ಶೆಟ್ಟಿ, ಕೃಷಿಕ ಕೇಶವ ಭಂಡಾರಿ ಕೈಪ ಬೆಳ್ಳಿಪ್ಪಾಡಿ, ಪಣಿರಾಜ್ ಜೈನ್ ಗುತ್ತಿನಮನೆ, ಮಂಜಪ್ಪ ರೈ ಬಾರಿಕೆ ಮನೆ, ಗಂಗಾಧರ ಅಮೀನ್ ಹೊಸಮನೆ, ಸಂತೋಷ್ ರೈ ಇಳಂತಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸ್ಥಳ ದಾನಿಗಳಾದ ವಿಶ್ವನಾಥ ಗೌಡ ನಡುಮನೆ, ಅಶೋಕ್ ಗೌಡ ದೇವಸ್ಯರವರನ್ನು ಸನ್ಮಾನಿಸಲಾಯಿತು. ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ತನುಷ್ ರವರನ್ನು ಗೌರವಿಸಲಾಯಿತು.

ವೈಷ್ಣವೀ, ರಮ್ಯ, ಯಶಸ್ವಿನಿ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಜಗಜೀವನ್ ದಾಸ್ ರೈ ಸ್ವಾಗತಿಸಿದರು. ರಮಾನಂದ ಬಲ್ಯಾಯ, ಜಗದೀಶ ಗೌಡ ಮೇಗಿನಪಂಜ, ಸಾಂತಪ್ಪ, ಹರೀಶ್ ಪೂಜಾರಿ ಕಾರ್ಪಾಡಿ, ಅರವಿಂದ ಭಂಡಾರಿ, ಅಶೋಕ್ ಗೌಡ, ಅವಿನಾಶ್ ಪಾಪೆತ್ತಡ್ಕ, ಹರಿಣಾಕ್ಷಿ ಡಿ ರೈ, ತಾರಾನಾಥ ಮೇರ್ಲ, ಚಂದ್ರಕಲಾ ರವಿಪ್ರಕಾಶ್, ಶ್ರವಣ್ ಕಾಣಿಕೆ, ಸಂದೀಪ್ ಶಿವಗಿರಿ, ಚಂದ್ರನಾಥ ಬಂಗೇರ ಆರ್ಯಾಪು, ನಾಗೇಶ್, ವಸಂತ ಆರ್ಯಾಪು, ಸಂದೀಪ್ ಕಿನ್ನಿಮಜಲು, ಮಹಾಬಲ ರೈ ವಳತ್ತಡ್ಕ ಅತಿಥಿಗಳಿಗೆ ಶಾಲು, ಸ್ಮರಣಿಕ ನೀಡಿ ಗೌರವಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್, ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಜಯಂತ ಶೆಟ್ಟಿ ವಂದಿಸಿದರು.

ಕ್ಷೇತ್ರದಲ್ಲಿ ಬೆಳಿಗ್ಗೆ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಸ್ವಶಾಂತಿ, ಶ್ವಾನ ಶಾಂತಿ, ಅದ್ಭುತ ಶಾಂತಿ, ಚೋರಶಾಂತಿ ಹೋಮಾದಿಗಳು, ಮಧ್ಯಾಹ್ನ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಅಂಕುರಪೂಜೆ, ದುರ್ಗಾಪೂಜೆ, ಮಂಟಪ ಸಂಸ್ಕಾರ, ಕುಂಭೇಶ ಕಕರ್ರ್‍ಅರೀಪೂಜೆ, ಅನುಜ್ಞಾ ಕಲಶಪೂಜೆ, ಪರಿಕಲಶಪೂಜೆ, ಅಧಿವಾಸ ಹೋಮ, ಕಲಶಾಧಿವಾಸ ಮಹಾಪೂಜೆ ನಡೆಯಿತು. ಶ್ರೀ ಉಳ್ಳಾಲಿ ಭಜನಾ ಮಂಡಳಿ ಕಾರ್ಪಾಡಿ, ಷಣ್ಮುಖ ಭಜನಾ ಮಂಡಳಿ ಕಾರ್ಪಾಡಿ, ಮಹಾವಿಷ್ಣು ಭಜನಾ ಮಂಡಳಿ ಕುರಿಯ, ಚಾಮುಂಡೇಶ್ವರಿ ಭಜನಾ ಮಂಡಳಿ ಮೊಟ್ಟತ್ತಡ್ಕ ಇವರಿಂದ ಭಜನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಧೀ ಶಕ್ತಿ ಯಕ್ಷ ಬಳಗ ತೆಂಕಿಲ ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ಸಂಪ್ಯ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ರಾತ್ರಿ ಶರತ್ ಆಳ್ವ ಕೂರೇಲು ಸಾರಥ್ಯದ ಬೊಳ್ಳಿ ಬೊಲ್ಪು ಕಲಾವಿದರಿಂದ ರಂಗ ಮಾಣಿಕ್ಯ ಸುಬ್ಬ ಸಂಟ್ಯಾರ್ ನಿರ್ದೇಶಿಸಿರು `ಮರ್ಲ್ ಕಟ್ಟೋಡ್ಚಿ ಎಂಬ ತುಳು ನಾಟಕ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top