ಪುತ್ತೂರು: 2024 ರ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತೆಂಕಿಲ ನರೇಂದ್ರ ಪ.ಪೂ.ಕಾಲೇಜಿನ ವಾಣಿಜ್ಯ ವಿಭಾಗದ ಕು. ಭೂಮಿಕಾ ಜಿ. 589 (98.16%) ಅಂಕ ಗಳಿಸಿ ರಾಜ್ಯದಲ್ಲಿ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ. ಪುತ್ತೂರು ತಾಲೂಕಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಭೂಮಿಕಾ ಜಿ. ಇವರು ಲೆಕ್ಕಶಾಸ್ತ್ರ-98, ಅರ್ಥಶಾಸ್ತ್ರ-97, ಸಂಸ್ಕೃತ-100, ಮೂಲಗಣಿತ-100, ವ್ಯವಹಾರ ಅಧ್ಯಯನ-98, ಇಂಗ್ಲಿಷ್-96, ಅಂಕಗಳೊಂದಿಗೆ ಅತ್ಯುತ್ತಮ ಸಾಧನೆಯನ್ನು ಮಾಡಿರುವುದರ ಜೊತೆಗೆ ರಾಜ್ಯಕ್ಕೆ ಹತ್ತನೇ ಸ್ಥಾನವನ್ನು ಪಡೆದಿರುತ್ತಾರೆ. ಈಕೆ ಪುತ್ತೂರಿನ ಹಾರಾಡಿ ನಿವಾಸಿ ಗಣೇಶ್ ಆಚಾರ್ಯ ಮತ್ತು ಚಂದ್ರಕಲಾ ಜಿ. ದಂಪತಿ ಪುತ್ರಿ.
ವಿಜ್ಞಾನ ವಿಭಾಗದಲ್ಲಿ ಕು. ಸಂಜನಾ ಸತೀಶ ಕಲ್ಲೂರಾಯ 585 (97.5) ಅಂಕ ಪಡೆದಿದ್ದು, ಭೌತಶಾಸ್ತ್ರ-96, ರಸಾಯನಶಾಸ್ತ್ರ-97, ಗಣಿತ-95, ಗಣಕ ವಿಜ್ಞಾನ -100, ಸಂಸ್ಕೃತ-100, ಇಂಗ್ಲಿಷ್-97 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ಈಕೆ ಪುತ್ತೂರಿನ ಕುಂಜೂರುಪಂಜ ನಿವಾಸಿ ಸತೀಶ ಕಲ್ಲೂರಾಯ ಮತ್ತು ರೂಪಶ್ರೀ ದಂಪತಿ ಪುತ್ರಿ. ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ಸನ್ಮಾನಿಸಿ ಶುಭಹಾರೈಸಿದರು, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ, ಸಂಚಾಲಕ ಸಂತೋಷ ಬಿ., ಸದಸ್ಯ ಸಂಪತ್ ಕುಮಾರ್, ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.