ಡಾಕ್ಟರೇಟ್ ಪದವಿ ಪಡೆದ ಕೆ.ವಿ.ಜಿ ಇಂಜನಿಯರಿಂಗ್ ಕಾಲೇಜಿನ ಉಪನ್ಯಾಸಕ: ಫ್ರೋ ಸಲೀಮ್ ಮಲಿಕ್ ಎಸ್

ಸುಳ್ಯ:ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ರೀಸರ್ಚ್ ಸೆಂಟರ್‌ನ ವಿದ್ಯಾರ್ಥಿ ಪ್ರೊಫೆಸರ್ ಸಲೀಮ್ ಮಲಿಕ್ ಎಸ್. ಇವರ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇವರು ವಿಟಿಯುನ ಎಕ್ಸೆಕ್ಯುಟಿವ್ ಕೌನ್ಸಿಲ್ ಸದಸ್ಯರು, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ. ಇವರ ಮಾರ್ಗದರ್ಶನದಲ್ಲಿ “Build out of an efficacious Arbitrator Miniature in Scolastic Systamatics for Predictive Anatamization” ಎಂಬ ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದರು.

ಕೆ.ವಿ.ಜಿ ಇಂಜನಿಯರಿಂಗ್ ಕಾಲೇಜು 11 ವರ್ಷ ಕಾಲ ಸಹಾಯಕ ಪ್ರಾಧ್ಯಪಕರಾಗಿ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು.
ಇವರ ಹಲವಾರು ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ
ಪ್ರಕಟಣೆಗೊಂಡಿದೆ. ಇವರನ್ನು ಎ.ಒ.ಎಲ್.ಇ.(ರಿ) ಕಮಿಟಿ
‘ಬಿ’ ಇದರ ಚೇರ್‌ಮೆನ್ ಡಾ. ರೇಣುಕಾಪ್ರಸಾದ್ ಕೆ.ವಿ.,
ಕಾರ್ಯದರ್ಶಿ ಡಾ. ಜ್ಯೋತಿ ಆ‌ರ್. ಪ್ರಸಾದ್, ಮೆಂಬರ್ ಡಾ.ಅಭಿಜ್ಞ ಕೆ.ಆ‌ರ್., ವಿಟಿಯುನ ಎಕ್ಸೆಕ್ಯುಟಿವ್ ಕೌನ್ಸಿಲ್‌ ಸದಸ್ಯರು, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರು ಡಾ.ಸುರೇಶ ವಿ., ಉಪಪ್ರಾಂಶುಪಾಲರು ಮತ್ತು ಡೀನ್ ಸ್ಟುಡೆಂಟ್ ಅಫೇರ್ಸ್ ಡಾ. ಶ್ರೀಧರ್ ಕೆ., ಪ್ರೊಫೆಸರ್, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ/ಡೀನ್ ರೀಸರ್ಚ್ ಡಾ. ಸವಿತಾ ಸಿ.ಕೆ., ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂಧಿ ವರ್ಗದವರು ಅಭಿನಂದಿಸಿರುತ್ತಾರೆ





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top