ಮಂಗಳೂರು : ದಕ್ಷಿಣಕನ್ನಡದಲ್ಲಿ ಬಿಸಿಲಿನ ಶಾಖ ಹೆಚ್ಚಾಗಿದ್ದು, ಪ್ರಾಣಿ ಪಕ್ಷಿಗಳಿಗೆ ನೀರಿನ ತೊಂದರೆಯಾಗುತ್ತಿದೆ. ಈ ಹಿನ್ನಲೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ತಿಳಿಸಿದರೆ.
ಅವರು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಯ ಕಟ್ಟಡಗಳ ಮೇಲೆ ನೆರಳಿನ ಆಶ್ರಯ ಇರುವಲ್ಲಿ ಮಡಕೆ, ಪಾತ್ರೆ, ಅಥವಾ ಟಬ್‌ಗಳಲ್ಲಿ ಸಾಕಷ್ಟು ನೀರು ತುಂಬಿಸಿಡುವ ಮೂಲಕ ಹಕ್ಕಿಗಳಿಗೆ ನೀರುಣಿಸಬೇಕು.
ಬೇಸಿಗೆಯಲ್ಲಿ ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಉಂಟಾಗಿದೆ. ಒಂದು ವಾರದಿಂದ ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಬಿಸಿಲಿನ ತೀವ್ರತೆಗೆ ಜನ ಸಾಮಾನ್ಯರಿಗೆ ಮಾತ್ರವಲ್ಲದೆ ಹಕ್ಕಿಗಳಿಗೆ ಕೂಡಾ ಕುಡಿಯುವ ನೀರಿನ ಅಭಾವ ಉಂಟಾಗಿ, ತೊಂದರೆಗಳಾಗುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾದಾಗ ಪಕ್ಷಿಗಳಿಗೆ ಹೆಚ್ಚು ನೀರಿನ ಅಗತ್ಯವಿದೆ. ಬಿಸಿಲಿನ ಶಾಖದ ಹೊಡೆತದಿಂದ ಹಕ್ಕಿಗಳನ್ನು ರಕ್ಷಿಸಲು, ಅವುಗಳಿಗೆ ಕುಡಿಯುವ ನೀರು ಒದಗಿಸುವುದು ಉತ್ತಮ ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಹಕ್ಕಿಗಳಿಗೆ ಮಡಕೆ, ಪಾತ್ರೆ, ಟಬ್‌ಗಳಲ್ಲಿ ಇಡುವ ನೀರನ್ನು ಆಗಾಗ ಬದಲಾಯಿಸುವ ಮೂಲಕ ಸೊಳ್ಳೆಗಳು ನಿಲ್ಲದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು. ಹೀಗೆ ಅದರ ಬಗ್ಗೆ ಛಾಯಾಚಿತ್ರದೊಂದಿಗೆ ಪಾಲನಾ ವರದಿಯನ್ನು ಈ ಕಚೇರಿಗೆ ಸಲ್ಲಿಸಬೇಕು ಎಂದೂ ಅವರು ಸೂಚಿಸಿದ್ದಾರೆ.