ಏ.19 : ಶ್ರೀ ಮಹಾಲಿಂಗೇಶ್ವರ ದೇವರ ಅವಭ್ರತ ಸ್ನಾನದಂದು ವೀರಮಂಗಳ ಕುಮಾರಧಾರ ನದಿ ಬಳಿಯ ಶ್ರೀದೇವರ ಕಟ್ಟೆ ಸಮರ್ಪಣೆ

ಪುತ್ತೂರು : ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭ್ರತ ಸ್ನಾನದ ಸ್ಥಳವಾದ ವೀರಮಂಗಲದ ಕುಮಾರಧಾರ ನದಿ ಬಳಿಯ ಕಟ್ಟೆಯನ್ನು ಏ.19 ರಂದು ಅವಭ್ರತ ಸ್ನಾನದ ಸಂದರ್ಭ ಶ್ರೀ ದೇವರಿಗೆ ಸಮರ್ಪಣೆ ಮಾಡುವ ಕಾರ್ಯಕ್ರಮ ನಡೆಯಲಿದೆ ಎಂದು ದಿನೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎಂಟುನೂರು ವರ್ಷಗಳಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಜಾತ್ರಾ ಸಂದರ್ಭದಲ್ಲಿ ಅವಭ್ರತ ಸ್ನಾನಕ್ಕಾಗಿ ವೀರಮಂಗಲದ ಕುಮಾರಧಾರ ನದಿಯ ಬಳಿ ಇದ್ದ ದೇವರ ಕಟ್ಟೆಗೆ ತೆರಳುವುದು ನಡೆದುಕೊಂಡು ಬರುತ್ತಿದೆ. ಕಳೆದ 22 ವರ್ಷಗಳ ಹಿಂದೆ ಜಳಕದ ಕಟ್ಟೆಯ ಜಾಗವನ್ನು ಕಾಸೀಂ ಎಂಬವರು ಅತಿಕ್ರಮಿಸಿ ಬೇಲಿ ಹಾಕಿದ್ದರು. ಮಾಹಿತಿ ತಿಳಿಸಿದ ದೇವಸ್ಥಾನದ ಆಗಿನ ಆಡಳಿತ ಮೊಕ್ತೇಸರ ಎನ್.ಕೆ. ಜಗನ್ನಿವಾಸ ರಾವ್, ಆಡಳಿತ ಸಮಿತಿಯ ಎ. ಮಾಧವ ಅವರು ಸ್ಥಳಕ್ಕೆ ತೆರಳಿ ಅಂದಿನ ಕಾರ್ಯನಿರ್ವಹಣಾಧಿಕಾರಿ ಉಮಾಕಾಂತ ರವರ ಸಮಕ್ಷಮದಲ್ಲಿ ಊರಿನ ನಾಗರಿಕರನ್ನು ಸೇರಿಸಿ ಬೇಲಿಯನ್ನು ತೆರವುಗೊಳಿಸಿ ಮತ್ತೆ ದೇವರು ಕಟ್ಟೆಗೆ ಹೋಗುವ ವ್ಯವಸ್ಥೆಯನ್ನು ಮಾಡಿರುತ್ತಾರೆ. ಈ ಕಟ್ಟೆ ಇರುವ ಸ್ಥಳವು ಕಾಸಿಂ ರವರಿಗೆ ಸೇರಿದ್ದೆಂದು ಆ ಸಂದರ್ಭದಲ್ಲಿ ದೇವರ ಭಕ್ತಾದಿಗಳಿಗೆ ತಿಳಿದು ಬಂದಿದೆ. ಆದರೆ ಅಲ್ಲಿ ಇದ್ದ ಕಟ್ಟೆ ಭಾಗಿರಥಿ ಎನ್ನುವವರ ಕುಟುಂಬಕ್ಕೆ ಸೇರಿದಾಗಿದ್ದು, ಅದರಲ್ಲಿ ನದಿಯ ಬದಿಯಲ್ಲಿ ಇದ್ದ ಅಶ್ವತ್ಥಕಟ್ಟೆಗೆ ದೇವರು ಪೂಜೆ ಸ್ವೀಕರಿಸಿ ನದಿಯಲ್ಲಿ ಅವಭ್ರತ ಸ್ನಾನಕ್ಕೆ ಹೋಗುತ್ತಿದ್ದರು. ಕಾಲಕ್ರಮೇಣ ಈ ಜಾಗವನ್ನು ಅನ್ಯಮತೀಯರೋರ್ವರಿಗೆ ಮಾರಾಟ ಮಾಡಲಾಗಿದೆ ಆ ಸಂದರ್ಭದಲ್ಲಿ 1942 ಸಬ್ ರಿಜಿಸ್ಟರ್ ದಸ್ತಾವೇಜುನಲ್ಲಿ ಕಂಡುಬರುವ ಉಲ್ಲೇಖದಂತೆ 10 ಸೆನ್ಸ್ ನ್ನು ಬಿಟ್ಟು ಮಾರಾಟ ಮಾಡಲಾಗಿತ್ತು.

ಸರಕಾರಿ ದಾಖಲೆ ಪ್ರಕಾರ ಆಗಿನ ಸರಕಾರದ ವ್ಯವಸ್ಥೆಯ ಲೋಪದೋಷದಿಂದಾಗಿ ಪಹಣಿಯಲ್ಲಿ 86ರ ಬದಲು 96 ಎಂದು ನಮೂದಾಗಿ ಕಳೆದ 48 ವರ್ಷಗಳಿಂದ ದೇವರು ಅನ್ಯಮತೀಯರ ಹೆಸರಿನಲ್ಲಿ ಇದ್ದ ಜಾಗದ ಕಟ್ಟೆಗೆ ದೇವರು ಜಳಕಕ್ಕಾಗಿ ಹೋಗುತ್ತಿದ್ದರು. ಕಳೆದ 22 ವರ್ಷಗಳ ಕೆಳಗೆ ಈ ವಿಚಾರ ಕೆಲವು ಶ್ರೀ ಮಹಾಲಿಂಗೇಶ್ವರ ದೇವರ ಭಕ್ತರ ಗಮನಕ್ಕೆ ಬಂದಿದ್ದು, ಅದರಂತೆ ವಿವಾದಗಳು ಇತ್ಯರ್ಥಕ್ಕೆ ಬರದಿರುವ ಸಮಯದಲ್ಲಿ ಅನೇಕ ಸಂಧಾನ ಸೂತ್ರಗಳು ಪುತ್ತೂರಿನ ಗಣ್ಯರಿಂದ ಮಾಡಿದಾಗಲು ಪಹಣಿ ಮಾಲಕ ಕಾಸಿಂ ಒಪ್ಪಂದಕ್ಕೆ ಒಪ್ಪದೆ ನ್ಯಾಯಾಲಯದ ತೀರ್ಮಾನಕ್ಕಾಗಿ ಕಾಯುತ್ತಿದ್ದರು.



































 
 

ಈ ಸಂದರ್ಭದಲ್ಲಿ ಮಾಧವ ಎ. ಮತ್ತು ರತ್ನಾಕರ್ ನಾಯಕ್, ಶ್ರೀಧರ್ ಪಟ್ಟ ರವರು ದಿನೇಶ್ ಕುಮಾರ್ ಜೈನ್ ಅವರ ಗಮನಕ್ಕೆ ಕಳೆದ 2023 ರ ಫೆಬ್ರವರಿ ತಿಂಗಳಲ್ಲಿ ತಂದಿದ್ದು, ಈ ಮೂವರು ತಿಳಿಸಿದ ವಿಷಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಚಾರಿಸಿದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಏನು ದಾಖಲೆಗಳು ಇಲ್ಲದೆ ಇರುವುದು ದಿನೇಶ್ ಕುಮಾರ್ ಜೈನ್ ಅವರ ಗಮನಕ್ಕೆ ಬಂದಾಗ ನ್ಯಾಯಾಲಯದಲ್ಲಿ ಕೇಸ್ ನಡೆಸುತ್ತಿದ್ದ ನ್ಯಾಯವಾದಿ ಉದಯ ರವಿಯವರಲ್ಲಿ ಈ ಜಾಗದ ದಾಖಲೆ ಪತ್ರಗಳನ್ನು ಪಡೆದು ಬದಲಾಗಿ ಅದರಲ್ಲಿ ಇರುವ ಅನುಕೂಲಕರ ವಿಷಯವನ್ನು ಮನಗಂಡು ನ್ಯಾಯವಾದಿ ಉದಯ ರವಿಯವರ ಮುಖಾಂತರ ಎಸಿಯವರಿಗೆ ಮನವಿ ಮಾಡಿ ಹತ್ತು ಸೆನ್ಸ್ ಜಾಗವನ್ನು ಶ್ರೀ ಮಹಾಲಿಂಗೇಶ್ವರ ದೇವರ ಹೆನರಿಗೆ ಪಹಣಿ 17/10 ನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ಅವಭ್ರತ ಸ್ನಾನದ ಕಟ್ಟೆ ಎಂದು ಮಾಡಲಾಯಿತು.

ಕಳೆದ ಮಾರ್ಚ್ ತಿಂಗಳಲ್ಲಿ ಕಾಸಿಂ ಅವರನ್ನು ಕರೆಸಿ ಮಾಧವ ಅವರ ಜೊತೆ ಪಟ್ಟ ಶ್ರೀಧರ್, ರತ್ನಾಕರ ನಾಯಕ್ ಮತ್ತು ದಿನೇಶ್ ಕುಮಾರ್ ಜೈನ್ ಜೊತೆ ಒಂದು ಸುತ್ತಿನ ಮಾತುಕತೆ ಮಾಡಿ ಕಟ್ಟೆಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲು ಒಪ್ಪಂದದ ತೀರ್ಮಾನ ಜಂಟಿಯಾಗಿ ಮಾಡಲಾಗಿದಂತೆ ಕಳೆದ ಎಪ್ರಿಲ್ ಸಂದರ್ಭದಲ್ಲಿ ನಡೆಯುವ ಜಾತ್ರೆಯ ಸಮಯದಲ್ಲಿ ಕಟ್ಟೆಗೆ ಸುತ್ತ ಕಾಂಪೌಂಡ್ ಗೋಡೆಯ ನಿರ್ಮಾಣ ಅಂದಿನ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯ ಮುಖಾಂತರ12 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ, ಇಂಟರ್ ಲಾಕ್‌ನ್ನು ನವೀನ್‌ಚಂದ್ರ ರೈ ಎಣ್ಮೂರುಗುತ್ತು ಅವರ ಮೂಲಕ ಅಳವಡಿಸಲಾಯಿತು. ರಂಜಿತ್ ಬಂಗೇರ ಅಭಯ ಮಾರ್ಬಲ್ ಮಂಗಳೂರು ಪ್ರಶಾಂತ್ ನಾಯಕ್ ಕೊಡಿಪ್ಪಾಡಿ, ಸುಬ್ರಹ್ಮಣ್ಯ ಕೆಮ್ಮಿಂಜೆ, ಎ. ಮಾಧವ ಸ್ವಾಮಿ ಅವರ ಸಹಕಾರದೊಂದಿಗೆ ಕಟ್ಟೆಯನ್ನು ನವೀಕರಿಸಲಾಯಿತು.

ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಅಂದಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಕೇಶವ ಪ್ರಸಾದ್ ಮುಳಿಯ ರವರ ಮೂಲಕ ಕಟ್ಟೆ ಶುದ್ದೀಕರಣಗೊಳಿಸಿ ಪೂಜೆ ಪುನಸ್ಕಾರಗಳನ್ನು ಮಾಡಿ ಸಾರ್ವಜನಿಕ ಅನ್ನಸಂತರ್ಪಣೆ ಮಾಡಿ ಕಟ್ಟೆಯನ್ನು ದೇವರಿಗೆ ಸಮರ್ಪಣೆ ಮಾಡಲಾಯಿತು.

ಅದರಂತೆ ದೇವರು ಅವಭ್ರತ ಸ್ನಾನಕ್ಕಾಗಿ ಹೋಗುವ ಸಂದರ್ಭದಲ್ಲಿ ಜೊತೆಗೆ ಸಾವಿರಾರು ಜನರು ಬರುವಾಗ ಕಟ್ಟೆಯ ಪೂಜೆಯನ್ನು ನೋಡಲು ಜಾಗದ ಕೊರತೆ ಇತ್ತು ಅದಕ್ಕಾಗಿ ಅಂದಿನ ಶಾಸಕ ಸಂಜೀವ ಮಠಂದೂರು ರವರಲ್ಲಿ ತಡೆಗೋಡೆಗೆ ಬೇಡಿಕೆ ನೀಡಿದ್ದು, ತಕ್ಷಣವೇ ಸ್ಪಂದಿಸಿ ಸಣ್ಣ ನೀರಾವರಿ ಇಲಾಖೆಯಿಂದ 50 ಲಕ್ಷದ ಅನುದಾನವನ್ನು ತರಿಸಿ ಕಟ್ಟೆಯ ಎದುರು ಭಾಗದ ಆಕಾರದಲ್ಲಿ ತಡೆಗೋಡೆ ನಿರ್ಮಿಸಿ ಅಧಿಕ ಜಾಗದ ವ್ಯವಸ್ಥೆಯನ್ನು ಮಾಡಿಸಿ ಕೊಟ್ಟರು.

ಈಗ ಸುತ್ತ ಹಾಕಿರುವ ಕಾಂಪೌಂಡ್ ಗೋಡೆಯ ಒಳಗೆ ಸ್ವಾಧೀನದಲ್ಲಿ ದೇವರ ಕಟ್ಟೆಯ ಬಳಿ 05.75 ಸೆನ್ಸ್ ಜಾಗ ಕಾಸಿಂ ಅವರ ಉಳಿಕೆ ಜಾಗವೂ ಇತ್ತು. ಈ ಜಾಗವನ್ನು ಕಾಸಿಂ ಅವರಿಂದ ಸ್ವಾಮಿ ಕಲಾ ಮಂದಿರದ ಮಾಲಕರು ಮಾಧವ ಎ ಮತ್ತು ಅವರ ಕುಟುಂಬಸ್ಥರು ಅಲ್ಲಿಯ ಮಾರ್ಕೆಟ್ ರೇಟ್ ನೀಡಿ ಖರೀದಿ ಮಾಡಿ ಇತರ ಖರ್ಚುಗಳು ಸೇರಿ ದಾಖಲೆ ಪತ್ರಗಳನ್ನು ತಯಾರಿಸಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಏ.19 ರಂದು ದೇವರ ಅವಭ್ರತ ಸ್ನಾನದ ಸಮಯದಲ್ಲಿ ದೇವರಿಗೆ ಸಮರ್ಪಣೆ ಮಾಡುವುದು ಎಂದು ನಿರ್ಧಾರವನ್ನು ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಷ್ಣುಮೂರ್ತಿ ದೇವಸ್ಥಾನದ ರಸ್ತೆಯಿಂದ ವೀರಮಂಗಲದ ದೇವರ ಅವಭ್ರತ ಸ್ನಾನದ ಕಟ್ಟೆಗೆ ಹೋಗುವ 500 ಮೀಟರ್ ರಸ್ತೆಗೆ ಬೇಡಿಕೆಯ ಮೇರೆಗೆ ಶಾಸಕರಾದ ಅಶೋಕ್ ಕುಮಾರ್ ರೈ ರವರ ರೂ. 20 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆಯನ್ನು ಮಾಡಲಾಗಿದೆ. ಈ ಕಾರ್ಯಕ್ಕಾಗಿ ಶ್ರೀ ಮಹಾಲಿಂಗೇಶ್ವರ ದೇವರು ವೀರಮಂಗಳ ದೇವರ ಕಟ್ಟೆಗೆ ಅವಭ್ರತ ಸ್ನಾನಕ್ಕಾಗಿ ಪೂಜೆ ಸ್ವೀಕರಿಸಿದ ಸಮಯದಲ್ಲಿ ಒಂದು ಪೂಜೆಯನ್ನು ಮಾಧವ ಅವರ ಹೆಸರಲ್ಲಿ ಅಜೀವ ಪರ್ಯಂತ ವಶಂಸ್ಕರಿಗೆ ಪ್ರಸಾದ ನೀಡಲು ಅಡಳಿತ ಮಂಡಳಿ ನಿರ್ಣಯವನ್ನು ಮಾಡಿದೆ ಎಂದು ತಿಳಿಸಿದರು.

ಈ ದೇವರ ಕಾರ್ಯಕ್ಕೆ ಭಕ್ತರಾದ ನ್ಯಾಯವಾದಿಗಳಾದ ಚಿದಾನಂದ ಬೈಲಾಡಿ, ಶಿವಪ್ರಸಾದ್, ಸೂರ್ಯನಾರಾಯಣ ಹಾಗೂ ಭಾಮಿ ಅಶೋಕ ಶೆಣೈ, ರಂಜಿತ್ ಜೈನ್, ಸದಾನಂದ ನಾಯ್ಕ ಮುಕ್ರಂಪಾಡಿ, ಮುಳಿಯ ಕೇಶವ ಪ್ರಸಾದ್ ಮತ್ತು ಆಗಿನ ಆಡಳಿತ ಮಂಡಳಿಯ ಸದಸ್ಯರು, ಬಾಲಚಂದ್ರ ಸೊರಕೆ, ಧರ್ಣಪ್ಪ ಗೌಡ ವೀರಮಂಗಲ ಮತ್ತು ಮಹಾಬಲ ರೈ ವೀರಮಂಗಲ, ಶೀನಪ್ಪ ಮಲ್ಯ ವೀರಮಂಗಲ, ದಿ. ಮಾಜಿ ಕಾರ್ಯನಿರ್ವಹಣಾಧಿಕಾರಿ ಉಮಾಕಾಂತ ರಾವ್ ಸಹಕಾರ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರತ್ನಾಕರ ನಾಯ್ಕ್, ಮಾಧವ ಎ., ಶ್ರೀಧರ ಪಟ್ಲ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top