ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರ ಉದ್ದೀಪನಾ ಕಾರ್ಯಕ್ರಮ

ಪುತ್ತೂರು: ತಂತ್ರಜ್ಞಾನವು ಅಪರಿಮಿತ ವೇಗದಲ್ಲಿ ಬದಲಾವಣೆಯಾಗುತ್ತಿದೆ. ನಿರ್ಮಾಣ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಗಳಾಗುತ್ತಿದೆ. ಹೊಸ ಪಠ್ಯಕ್ರಮದ ಮೂಲಕ ನೂತನ ತಂತ್ರಜ್ಞಾನಗಳು ನಮ್ಮನ್ನು ತಲಪುವುದಕ್ಕೆ ಸಮಯಾವಕಾಶ ಬೇಕಾಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿ ಉಪನ್ಯಾಸಕರ ಉದ್ದೀಪನಾ ಕಾರ್ಯಕ್ರಮಗಳನ್ನು ಮಾಡುವುದು ಆವಶ್ಯಕ ಎಂದು ಬೆಂಗಳೂರಿನ ಮೇದಿನಿ ಟೆಕ್ನಾಲಜೀಸ್ ಸಂಸ್ಥೆಯ ಡಿಸೈನ್ ಇಂಜಿನಿಯರ್ ಮೋಹನ್ ಪ್ರಭು ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ, ಬೆಂಗಳೂರಿನ ಮೇದಿನೀ ಟೆಕ್ನಾಲಜೀಸ್, ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘ ಮತ್ತು ಕಾಲೇಜಿನ ಐಕ್ಯುಎಸಿ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ 5 ದಿನಗಳ ಬಿಲ್ಡಿಂಗ್ ಇನ್ಫಾರ್ಮೇಶನ್ ಮಾಡೆಲಿಂಗ್ ಇನ್ ಸಿವಿಲ್ ಇಂಜಿನಿಯರಿಂಗ್-ಎಂಪವರಿಂಗ್ ಎಜುಕೇಟರ್ಸ್ ವಿಷಯದ ಬಗ್ಗೆ ಉಪನ್ಯಾಸಕರ ಉದ್ದೀಪನಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಮೂಲ ಇಂಜಿನಿಯರಿಂಗ್ ವಿಭಾಗಗಳಿಗೆ ಯಾವತ್ತೂ ಅಳಿವಿಲ್ಲ. ಇತರ ವಿಭಾಗಗಳ ಏರುಗತಿಯ ಬೆಳವಣಿಗೆಯಿಂದಾಗಿ ಕೊಂಚ ಸೊರಗಿದಂತೆ ಅನಿಸುತ್ತದೆ ಎಂದರು.



































 
 

ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂಜಿನಿಯರಿಂಗ್ ವಿಭಾಗದ ಪ್ರತಿಯೊಂದು ವಿಷಯಗಳೂ ಸಮಾನ ಅವಕಾಶಗಳನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳನ್ನು ಹೇಳುವ ಮೊದಲು ಬೋಧಕರು ಅದರ ಬಗ್ಗೆ ತಿಳುವಳಿಕೆ ಹೊಂದುವುದು ಆವಶ್ಯಕ ಎಂದರು.

ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ, ಕಾರ್ಯಕ್ರಮ ಸಂಯೋಜಕ ಡಾ.ಆನಂದ್.ವಿ.ಆರ್., ಸಹ ಸಂಯೋಜಕಿ ಪ್ರೊ.ಸುರೇಖಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೊ.ಪ್ರಶಾಂತ ಸ್ವಾಗತಿಸಿ, ಪ್ರೊ.ಸುರೇಖಾ.ಟಿ ವಂದಿಸಿದರು. ಪಲ್ಲವಿ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top