ತಿರುಪತಿ: ತಿರುಪತಿ ದೇಗುಲದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಸರಕಾರದ ಅನುಮತಿ ಇಲ್ಲದೆ ಕೋಟ್ಯಂತರ ರೂಪಾಯಿ ಎಂಜಿನಿಯರಿಂಗ್ ಕಾಮಗಾರಿ ಆರ್ಡರ್ ಗಳನ್ನು ನೀಡಲಾಗಿದೆ ಎಂದು ಆರೋಪ ಕೇಳಿ ಬರುತ್ತಿದೆ.
ತೆಲುಗು ದೇಶಂ ಪಾರ್ಟಿ ವಕ್ತಾರ ನೀಲಾಯಪಾಲೆಂ ವಿಜಯ್ ಕುಮಾರ್, ದೇವಸ್ಥಾನದ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ ಧರ್ಮಾ ರೆಡ್ಡಿ ವಿರುದ್ಧ ಈ ಗಂಭೀರ ಆರೋಪ ಮಾಡಲಾಗಿದೆ.
ಕರುಣಾಕರ್ ರೆಡ್ಡಿ ಮತ್ತು ಧರ್ಮಾ ರೆಡ್ಡಿ ಉಸ್ತುವಾರಿಯಲ್ಲಿ ಟಿಟಿಡಿಯಿಂದ ದೊಡ್ಡ ಪ್ರಮಾಣದ ಆರ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಟಿಡಿಪಿ ಆರೋಪಿಸಿದೆ. ಬಜೆಟ್ ಅನುಮೋದನೆ ಅಥವಾ ಸರ್ಕಾರದ ಅನುಮತಿಯಿಲ್ಲದೆ 1,300 ಕೋಟಿ ರೂ. ಮೌಲ್ಯದ ಎಂಜಿನಿಯರಿಂಗ್ ಕಾಮಗಾರಿ ಆರ್ಡರ್ ಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಕರುಣಾಕರ್ ರೆಡ್ಡಿ ಅಧ್ಯಕ್ಷರಾದ ನಂತರ ಟಿಟಿಡಿ ಮಂಡಳಿ ಸಭೆಗಳಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡುತ್ತಿದೆ. ಶಾಸಕರಾಗಿರುವ ಕರುಣಾಕರ್ ರೆಡ್ಡಿಯವರ ಮಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಕರುಣಾಕರ್ ರೆಡ್ಡಿ ಟಿಟಿಡಿ ನಿಧಿಯಿಂದ ತಿರುಪತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ. ಇದು ಟಿಟಿಡಿ ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯಾಗಿದೆ. ನೀತಿ ಸಂಹಿತೆ ಬಂದ ನಂತರ ಕೆಲಸದ ಆದೇಶಗಳನ್ನು ನೀಡಲಾಗುತ್ತಿದೆ. ಮಾತ್ರವಲ್ಲದೆ ಈ ಕಾಮಗಾರಿಗಳಲ್ಲಿ ಕರುಣಾಕರ ರೆಡ್ಡಿ ಶೇ.10ರಷ್ಟು ಕಿಕ್ ಬ್ಯಾಕ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೀಗಾಗಿ ತಿರುಪತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಟಿಟಿಡಿ ನೀಡಿದ ಕೆಲಸದ ಆದೇಶಗಳನ್ನು ಪರಿಶೀಲಿಸುವಂತೆ ಭಾರತೀಯ ಚುನಾವಣಾ ಆಯೋಗವನ್ನು (ಇಸಿಐ) ಟಿಡಿಪಿ ವಕ್ತಾರ ಒತ್ತಾಯಿಸಿದ್ದಾರೆ. ತಿರುಪತಿಯಲ್ಲಿ ಕಟ್ಟಡ ವಿನ್ಯಾಸವೂ ಇಲ್ಲದೇ ಈಗಿರುವ ಕಟ್ಟಡಗಳನ್ನು ಕೆಡವಿ ಎರಡು ಚೌಲ್ಟಿ ನಿರ್ಮಾಣಕ್ಕೆ ವರ್ಕ್ ಆರ್ಡರ್ ನೀಡಲಾಗಿದೆ. ಪ್ರತಿ ಕೋಳಿ ಫಾರಂ ನಿರ್ಮಿಸಲು 300 ಕೋಟಿ ರೂಪಾಯಿ ಖರ್ಚು ಮಾಡಲಾಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದಿದ್ದಾರೆ.
ಮಗನ ಸ್ಪರ್ಧೆ ಸುಗಮವಾಗಲು ಕರುಣಾಕರ್ ರೆಡ್ಡಿ ಟಿಟಿಡಿ ವತಿಯಿಂದ ಈ ಟೆಂಡರ್ಗಳನ್ನು ಕರೆದಿದ್ದಾರೆ. ಇದು ಸ್ಪಷ್ಟವಾಗಿ ಎಂಸಿಸಿ ಉಲ್ಲಂಘನೆಯ ಪ್ರಕರಣವಾಗಿದೆ.