ಬೆಂಗಳೂರು: ಇನ್ನುಮುಂದೆ ಚಂದ್ರಯಾನ-3 ಲ್ಯಾಂಡಿಂಗ್ ಸೈಟ್ ನ್ನು ‘ಶಿವ ಶಕ್ತಿ’ ಎಂಬ ಹೆಸರಿನಿಂದ ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ ಇದೀಗ ಏಳು ತಿಂಗಳ ನಂತರ ಅಂತರರಾಷ್ಟ್ರೀಯ ಖಗೋಳ ಒಕ್ಕೂಟ ಮಾರ್ಚ್ 19 ರಂದು ಈ ಹೆಸರನ್ನು ಅನುಮೋದಿಸಿದೆ.
ಅಂತರರಾಷ್ಟ್ರೀಯ ಖಗೋಳ ಒಕ್ಕೂಟ ಅನುಮೋದಿಸಿದ ಗ್ರಹಗಳ ಹೆಸರುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುವ ಗೆಜೆಟಿಯರ್ ಆಫ್ ಪ್ಲಾನೆಟರಿ ನಾಮಕರಣದ ಪ್ರಕಾರ “ಐಎಯು ವರ್ಕಿಂಗ್ ಗ್ರೂಪ್ ಫಾರ್ ಪ್ಲಾನೆಟರಿ ಸಿಸ್ಟಮ್ ನಾಮಕರಣವು ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್‌ನ ಲ್ಯಾಂಡಿಂಗ್ ಸೈಟ್‌ಗೆ ಸ್ಟೇಟಿಯೋ ಶಿವ ಶಕ್ತಿ ಎಂಬ ಹೆಸರನ್ನು ಅನುಮೋದಿಸಿದೆ.”
ಆಗಸ್ಟ್ 23, 2023 ರಂದು ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ದ್ರುವದಲ್ಲಿ ಲ್ಯಾಂಡ್ ಅಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿತ್ತು. ಇದಾದ ಮೂರು ದಿನಗಳ ಬಳಿಕ ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ನಲ್ಲಿ ಪ್ರಧಾನಿ ಮೋದಿ ವಿಕ್ರಂ ಲ್ಯಾಂಡ್ ಆದ ಜಾಗವನ್ನು ‘ಶಿವಶಕ್ತಿ’ ಎಂದು ಘೋಷಣೆ ಮಾಡಿದ್ದರು.