ಬೆಂಗಳೂರು: ರಾಜ್ಯದಲ್ಲಿ ಸದ್ಯ 5, 8 ಮತ್ತು 9 ನೇ ತರಗತಿಯ ಪರೀಕ್ಷೆ ವಿಳಂಬದ ಹಿನ್ನಲೆಯಲ್ಲಿ ಈ ಭಾರಿ ಬೇಸಿಗೆವಿಸ್ತರಣೆ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಬಿರು ಬೇಸಿಗೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನೀರಿನ ಕೊರತೆ ಕಾಡುತ್ತಿದೆ. ಈ ಹಿನ್ನಲೆಯಲ್ಲಿ ಬೇಸಿಗೆ ರಜೆಯನ್ನು ಜೂ.10 ರ ತನಕ ವಿಸ್ತಿರಿಸುವ ನಿರೀಕ್ಷೆಯಿದೆ.
ಪ್ರತಿಭಾರಿ ಮೇ 24 ರ ವೇಳೆಗೆ ಶಾಲಾರಂಭ ಮಾಡಲಾಗುತ್ತಿತ್ತು. ರಿವಿಸನ್ ಹಾಗೂ ಶಾಲಾ ತರಗತಿಗಳಿಗೆ ಮಕ್ಕಳನ್ನು ಅಣಿಗೊಳಿಸುವ ಕಾರಣಕ್ಕೆ ಶಾಲಾ ಆರಂಭೋತ್ಸವ, ಶಾಲೆಗೆ ದಾಖಲೀಕರಣದಂತಹ ಹಲವು ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಹಮ್ಮಿಕೊಳ್ಳುತ್ತಿತ್ತು. ಆದರೆ ಈ ಭಾರಿ ಶಾಲಾರಂಭ ಜೂನ್ ಎರಡನೇ ವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ಮತ್ತೊಂದೆಡೆ ವಿಧಾನಸಭೆ, ಉಪಚುನಾವಣೆ ಹಾಗೂ ಲೋಕಸಭಾ ಚುನಾವಣೆ ಎಲ್ಲವೂ ಸೇರಿ ಹಲವು ಹಂತದಲ್ಲಿ ದೇಶದ 500 ಕ್ಕೂ ಹೆಚ್ಚು ಸ್ಥಾನಗಳಿಗೆ ಎಲೆಕ್ಷನ್ ನಡೆಯುತ್ತಿದೆ. ಹೀಗಾಗಿ ಮತದಾನದ ಬಳಿಕ ಮತ ಎಣಿಕೆಗೆ ಬರೋಬ್ಬರಿ 1 ತಿಂಗಳವರೆಗಿನ ಕಾಲಾವಲಾಶವಿದೆ. ಜೂನ್ 4. ಕ್ಕೆ ಮತ ಎಣಿಕೆ ನಡೆಯೋದರಿಂದ ಶಾಲೆಗಳು ಚುನಾವಣಾ ಆಯೋಗದ ಹಿಡಿತದಲ್ಲೇ ಇರುತ್ತವೆ. ಬಹುತೇಕ ಶಾಲೆಗಳಲ್ಲೇ ಚುನಾವಣಾ ಪ್ರಕ್ರಿಯೆ ನಡೆಯೋದು. ಚುನಾವಣೆ ಬಳಿಕ ಶಾಲೆಗಳನ್ನು ಸ್ಟ್ರಾಂಗ್ ರೂಂ ಆಗಿ ಪರಿವರ್ತಿಸೋದರಿಂದ ಶಾಲೆಗಳನ್ನು ಆರಂಭಿಸುವುದು ಕಷ್ಟಸಾಧ್ಯ.