ಪುತ್ತೂರು ಶಾಸಕರು ಕೋಟಿ-ಕೋಟಿ ಅನುದಾನದ ಮಂತ್ರ ಜಪಿಸುವ ಮೂಲಕ ಜನರನ್ನು ದಾರಿತಪ್ಪಿಸುತ್ತಿದ್ದಾರೆ | ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ | ಅಂಕಿ-ಅಂಶಗಳ ಸಹಿತ ಜನತೆಗೆ ತಿಳಿಸುವ ಕೆಲಸ ಮಾಡಲಿ

ಪುತ್ತೂರು: ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆದು 300 ದಿನಗಳು ಕಳೆದಿದ್ದು, ಒಂದೆಡೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಗ್ಯಾರಂಟಿ ಯೋಜನೆಯಿಂದ ಮುಂದಿನ ಒಂದು ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಇನ್ನೊಂದೆಡೆ ಪುತ್ತೂರು ಶಾಸಕರು ಕೋಟಿ ಕೋಟಿ ಅನುದಾನಕ್ಕೆ ಶಿಲಾನ್ಯಾಸ ನೆರವೇರಿಸು ಮೂಲಕ ಅಭಿವೃದ್ಧಿಯ ಮಂತ್ರ ಜಪಿಸುತ್ತಿದ್ದು, ಈ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 1474 ಕೋಟಿ ಅನುದಾನ ಬಂದಿದ್ದು, ಶಿಲಾನ್ಯಾಸ ಮಾಡದಷ್ಟು ಅನುದಾನದ ಹೊಳೆಯೇ ಹರಿದು ಬಂದಿದೆ ಎಂದು ಬ್ಯಾನರ್ ಮೂಲಕ ಜನರಲ್ಲಿ ಗೊಂದಲ ಉಂಟು ಮಾಡುತ್ತಿದ್ದು, ಬ್ಯಾನರ್‍ ನಲ್ಲಿ ಹಾಕಿರುವ ಅನುದಾನ ಯಾವ ವರ್ಷದ್ದು, ಯಾವ ಸರಕಾರದ್ದು, ಯಾರ ಶಾಸಕರ ಅವಧಿಯಲ್ಲಿ ಬಂದದ್ದು ಎಂಬುದನ್ನು ಜನತೆಗೆ ಸ್ಪಷ್ಟವಾಗಿ ತಿಳಿಸಲಿ. ಅದನ್ನು ಬಿಟ್ಟು ನನ್ನ ಶಾಸಕತ್ವದ ಅವಧಿಯಲ್ಲೇ ಇಷ್ಟೊಂದು ಅನುದಾನ ಬಂದಿದೆ ಎಂದು ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೆಲ ದಿನಗಳ ಹಿಂದೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸುವ ಚೆಂಡೆಯೊಂದಿಗೆ ಅನುದಾನದ ಬ್ಯಾನರ್ ಹಾಕಿ ಬಿಜೆಪಿ ಕಾರ್ಯಕರ್ತನ ಮನೆಗೆ ನುಗ್ಗಿ ದಾಂಧಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ ಘಟನೆಗೆ ಶಾಸಕರು ಸಾಥ್ ನೀಡಿದ್ದು, ಇಂತಹಾ ಘಟನೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆದಿದೆ. ಪ್ರಜಾಪ್ರಭುತ್ವದಲ್ಲಿ ಓರ್ವ ಶಾಸಕರು ಮಾಡುವ ಕೆಲಸ ಇದಲ್ಲ, ಘನತೆ, ಗೌರವ ಹೆಚ್ಚಿಸುವ ಕೆಲಸ ಇದಲ್ಲ ಎಂದು ಹೇಳಿದ ಅವರು, ಅಂಕಿ ಅಂಶಗಳ ಮೂಲಕ ಅನುದಾನ ವಿವರಗಳನ್ನು ಜತೆಗೆ ತಿಳಿಸಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.







































 
 

1474.29 ಕೋಟಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿ ರೂ.1219 ಕೋಟಿ ನಮ್ಮ ಸರಕಾರದ ಯೋಜನೆಗಳು. ಅಲ್ಲದೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಡದ ನಮ್ಮ ಬಿಜೆಪಿ ಶಾಸಕರಿಂಸ ಸುಳ್ಯ ಕ್ಷೇತ್ರದ ಕೊಯಿಲಾ ಪಶು ವೈದ್ಯಕೀಯ ಕಾಲೇಜು, ನೀರಿನ ಸರಬರಾಜು ಮತ್ತು ಕೊಯಿಲಾ ಸಬ್ ಸ್ಟೇಷನ್ ಸೇರಿ 483 ಕೋಟಿಯ ಯೋಜನೆಯನ್ನು ಸೇರಿಸಿರುತ್ತಾರೆ. ಇದು ನಮ್ಮ ಹಿಂದಿನ ಸರಕಾರದ ಸಾಧನೆ. ಇವೆರಡನ್ನು ಕಾಂಗ್ರೆಸ್ ನ ದಾಸಕರ ಪ್ರಕಟಿಸಿರುವ ಅನುದಾನಗಳಲ್ಲಿ ಕಡಿತಗೊಳಿಸಿದರೆ ಕೇವಲ 104 ಕೋಟಿ ಅವರ ಅವಧಿಯದ್ದು. ಆದರೆ ಇದು ಬರೀ ಆಶ್ವಾಸನೆಯೂ ಎಂಬುದನ್ನು ಕಾಲವೇ ಉತ್ತರಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತೋಡಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top